ಕೋಝಿಕ್ಕೋಡ್: ರಷ್ಯಾದ ಮುಸ್ಲಿಂ ಅಂತಾರಾಷ್ಟ್ರೀಯ ವೇದಿಕೆ ಮತ್ತು ರಷ್ಯನ್ ಒಕ್ಕೂಟದ ಮುಸ್ಲಿಮರ ಧಾರ್ಮಿಕ ಮಂಡಳಿ ಜಂಟಿಯಾಗಿ ಆಯೋಜಿಸಿರುವ 18ನೇ ವಾರ್ಷಿಕ ಅಂತಾರಾಷ್ಟ್ರೀಯ ಮುಸ್ಲಿಂ ವೇದಿಕೆಯಲ್ಲಿ ಭಾರತೀಯ ಮುಸ್ಲಿಂ ವಿದ್ವಾಂಸ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಪ್ರತಿನಿಧಿಯಾಗಿ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಮತ್ತು ಮರ್ಕಝ್ ಪ್ರೊ-ಚಾನ್ಸಲರ್ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
‘ನ್ಯಾಯ ಮತ್ತು ಸಂಯಮ: ವಿಶ್ವ ವ್ಯವಸ್ಥೆಯ ದೈವಿಕ ತತ್ವಗಳು’ ಎಂಬ ಶೀರ್ಷಿಕೆಯ ಈ ಸಮ್ಮೇಳನವು ಡಿಸೆಂಬರ್ 8 ಮತ್ತು 9 ರಂದು ಮಾಸ್ಕೋದಲ್ಲಿ ನಡೆಯಲಿದೆ.
ಪ್ರಾಚೀನ ರಷ್ಯಾದ ಭಾಗವಾಗಿದ್ದ ವೋಲ್ಗಾ ಬಲ್ಗೇರಿಯಾದ ಜನರ 1100 ನೇ ವಾರ್ಷಿಕೋತ್ಸವ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ಅವರ ಐತಿಹಾಸಿಕ ನಿರ್ಗಮನದ 1400 ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ವರ್ಷದ ಅಂತರಾಷ್ಟ್ರೀಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಮುಸ್ಲಿಂ ಇಂಟರ್ ನ್ಯಾಷನಲ್ ಫೋರಂನ ಕಾರ್ಯದರ್ಶಿ ಮುಫ್ತಿ ಶೇಖ್ ರಾವಲ್ ಝೈನುದ್ದೀನ್ ಅವರ ಆಹ್ವಾನವನ್ನು ಭಾರತೀಯ ನಿಯೋಗ ಸ್ವೀಕರಿಸಿದೆ.