ನೀರವ್ ಮೋದಿ ಹಸ್ತಾಂತರ: ಬ್ರಿಟನ್ ಕೋರ್ಟ್ ಗೆ ಪ್ರತಿಕ್ರಿಯೆ ಸಲ್ಲಿಸಿದ ಭಾರತ

Prasthutha|

ನವದೆಹಲಿ: ತನ್ನ ಹಸ್ತಾಂತರಕ್ಕೆ ಸಂಬಂಧಿಸಿ ಬ್ರಿಟನ್ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನೀರವ್ ಮೋದಿ ಸಲ್ಲಿಸಿರುವ ಅರ್ಜಿಗೆ ಭಾರತದ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದಾರೆ.

- Advertisement -

ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸುವುದರ ಕುರಿತು ಡಿ.5 ರೊಳಗಾಗಿ ಪ್ರತಿಕ್ರಿಯೆ ಸಲ್ಲಿಸಲು ಗಡುವು ನೀಡಲಾಗಿತ್ತು. ಈ ಗಡುವಿನೊಳಗೆ ಪ್ರತಿಕ್ರಿಯೆ ಸಲ್ಲಿಸಲಾಗಿದೆ ಎಂದು ಭಾರತದ ಪರ ವಾದ ಮಂಡಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಸಿ) ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪವನ್ನು ನೀರವ್ ಮೋದಿ ಎದುರಿಸುತ್ತಿದ್ದಾರೆ.



Join Whatsapp