ಹುಬ್ಬಳ್ಳಿ: ದಲಿತ, ಮುಸ್ಲಿಮ್’ನ ಸಿಎಂ ಮಾಡೋದಿಲ್ಲ, ಕುಮಾರಸ್ವಾಮಿಯೇ ನಮ್ಮ ಮುಖ್ಯಮಂತ್ರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ 60 ರಿಂದ 65 ಸೀಟ್ ಬರಲ್ಲ. ನಾನು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಹೇಳುತ್ತೇನೆ, ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ಮುಸ್ಲಿಂ, ದಲಿತ ಸಿಎಂ ಮಾಡಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆ. ಆದರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಹೇಳುವ ಮೂಲಕ ದಲಿತ, ಮುಸ್ಲಿಂ ಸಿಎಂ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಜೆಡಿಎಸ್ ನಾಯಕರ ಚಿಂತನ – ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷ ಸಂಘಟನೆ ಹಾಗೂ ಪಂಚರತ್ನ ಕಾರ್ಯಕ್ರಮದ ರೂಪುರೇಷೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.