ನ್ಯಾಯಾಧೀಶರ ನೇಮಕಾತಿ ವಿವಾದ: ಸಿಜೆಐ ಎದುರೇ ಸುಪ್ರೀಂಕೋರ್ಟ್ ಕಾರ್ಯವೈಖರಿ ಬಗ್ಗೆ ಉಪ ರಾಷ್ಟ್ರಪತಿ ವಾಗ್ದಾಳಿ

Prasthutha|

ನವದೆಹಲಿ: ಸರ್ವೋಚ್ಚ ನ್ಯಾಯಾಲಯವು ಎನ್’ಜೆಎಸಿ- ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆಯನ್ನು ಕಿತ್ತೆಸೆದಿದ್ದರೂ ಲೋಕಸಭೆಯಲ್ಲಿ ಆ ಬಗ್ಗೆ ಪಿಸು ಮಾತಿಲ್ಲ; ಇದೊಂದು ಗಂಭೀರವಾದ ವಿಷಯ ಎಂದು ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಹೇಳಿದ್ದಾರೆ.

- Advertisement -

ಸಂಸತ್ತಿನಲ್ಲಿ ಪಾಸಾಗುವ ಕಾನೂನು ಜನರ ಅಭಿಲಾಷೆಯಾಗಿದ್ದು, ಅದನ್ನು ಕೋರ್ಟ್ ಕಿತ್ತೆಸೆದ ಉದಾಹರಣೆ ಎಲ್ಲೂ ಇಲ್ಲ. ಕಾಯ್ದೆಗಳ ಹೂರಣದ ಬಗ್ಗೆ ಮಾತ್ರ ಕೋರ್ಟುಗಳು ಗಮನಿಸಬೇಕು ಎಂದು ಅವರು ಹೇಳಿದ್ದಾರೆ. ಆದರೆ ಇದನ್ನು ಹೇಳುವಾಗ ಸಿಜೆಐ ಡಿ. ವೈ. ಚಂದ್ರಚೂಡ್ ವೇದಿಕೆಯಲ್ಲೇ ಹಾಜರಿದ್ದರು ಎಂದು ತಿಳಿದುಬಂದಿದೆ.

ದಿಲ್ಲಿಯಲ್ಲಿ ಎಲ್. ಎಂ. ಸಿಂಗ್ವಿ ಸ್ಮಾರಕ ಭಾಷಣ ನೀಡಿದ ಉಪರಾಷ್ಟ್ರಪತಿ, ನಮ್ಮ ಸಂವಿಧಾನದಲ್ಲಿ ನಾವು ಈ ದೇಶದ ಜನ ಎಂದಿದೆ, ಅದರಂತೆ ಸಂಸತ್ತು ಜನರ ಪ್ರಾತಿನಿಧ್ಯದ್ದಾಗಿದೆ ಎಂದು ಅವರು ಹೇಳಿದರು.

- Advertisement -

ಅಂದರೆ ಅಧಿಕಾರ ಜನರ ಕೈಯಲ್ಲಿದೆ ಮತ್ತು ಅವರ ಆಶಯ ಕಡ್ಡಾಯವಾದುದು. ಎನ್ ಜೆಎಸಿ ಕಾಯ್ದೆಯು 2015- 16ರಲ್ಲಿ ತಯಾರಾಗಿ ಆಮೇಲೆ ಸಂಸತ್ತಿನಲ್ಲಿ ಎಲ್ಲರ ನಡುವೆ ದಾಖಲೆಯಾಗಿ ಪಾಸಾದ ಕಾಯ್ದೆಯಾಗಿದೆ ಎಂದು ದನ್ಕರ್ ಹೇಳಿದರು.

ರಾಜ್ಯಸಭೆಯಲ್ಲಂತೂ ಆ ಕಾಯ್ದೆಯ ಬಗ್ಗೆ ವಿರೋಧವೇ ಇರಲಿಲ್ಲ. “ಸರ್ವೋಚ್ಚ ನ್ಯಾಯಾಲಯವು ಜನರ ಹಕ್ಕಿನ ಕಾಯ್ದೆಯನ್ನು ಕಿತ್ತು ಬಿಸಾಡಿದ ಉದಾಹರಣೆ ಜಗತ್ತಿನ ಎಲ್ಲೂ ಇಲ್ಲ” ಎಂದು ಅವರು ಹೇಳಿದರು.

ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯನ್ನು ಸುಪ್ರಿಂಕೋರ್ಟ್ ಕೊಲಿಜಿಯಂ ಮಾಡುತ್ತಿತ್ತು. ಕೊಲಿಜಿಯಂ ಕೊನೆಗೊಳಿಸಿ ಎನ್’ ಜೆಎಸಿ ಕಾಯ್ದೆ ತರಲಾಗಿತ್ತು. ಈ ಕಾಯ್ದೆ ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟು ಅದನ್ನು ಕಿತ್ತು ಹಾಕಿತ್ತು.

ಇದು ಗಂಭೀರ ವಿಷಯವಾದರೂ ಸಂಸತ್ತಿನಲ್ಲಿ ಪಿಸು ಮಾತು ಕೂಡ ಈ ಬಗೆಗೆ ಬಾರದ್ದು ಅಚ್ಚರಿ ಎಂದು ದನ್ಕರ್ ಹೇಳಿದರು.



Join Whatsapp