ಕುರ್ ಆನ್ ಪಾರಾಯಣ ಶಾಸ್ತ್ರ ವಿದ್ವಾಂಸ ಖಾರಿಅ್ ಅಬ್ದುಲ್ಲ ಮುಸ್ಲಿಯಾರ್ ನಿಧನ

Prasthutha|

ಬೆಳ್ತಂಗಡಿ: ಖ್ಯಾತ ಕುರ್ ಆನ್ ಪಾರಾಯಣ ಶಾಸ್ತ್ರ ವಿದ್ವಾಂಸ  ಖಾರಿಅ್ ಅಬ್ದುಲ್ಲ ಮುಸ್ಲಿಯಾರ್ ನಾವೂರು ನಿಧನರಾಗಿದ್ದಾರೆ.

- Advertisement -

ಮೂಲತಃ ಮದ್ದಡ್ಕದವರಾದ ಇವರು ಮಿತ್ತಬೈಲು, ಕೈಕಂಬ ಭಾಗದಲ್ಲಿ  ಮದರಸ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ವಿದ್ವಾಂಸರಾದ ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಅಬೂಬಕರ್ ಹಾಜಿ ಮಣ್ಣಂಕುಝಿ ಇವರ ಪ್ರಧಾನ ಗುರುಗಳಾಗಿದ್ದರು.

ಕುರ್ ಆನ್ ಪಾರಾಯಣ ಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯದ ಅರ್ಹತೆ ಪಡೆದು ಬಹ್ರೈನ್ ನಲ್ಲಿ ಸರಕಾರದ ಅಧೀನದ ಮದರಸದಲ್ಲಿ ಕುರ್ ಆನ್ ಪಾರಾಯಣ ಶಾಸ್ತ್ರದ  ಬೋಧಕ ಹುದ್ದೆಗೆ ಆಯ್ಕೆಯಾಗಿದ್ದ ಖಾರಿಅ್ ಅಬ್ದುಲ್ಲ ಮುಸ್ಲಿಯಾರ್ ಅಲ್ಲಿ ಅನೇಕ ವರ್ಷಗಳ ಕಾಲ ಸೇವೆಸಲ್ಲಿಸಿದ ಬಳಿಕ  ನಂತರ ಬಡ್ತಿ ಪಡೆದು ಬಹ್ರೈನ್ ಔಖಾಫಿನ ಮಸ್ಜಿದೊಂದರಲ್ಲಿ  ಇಮಾಮರಾಗಿ ಸೇವೆಯಲ್ಲಿದ್ದರು.

- Advertisement -

ವಿದ್ವತ್ತಿನ ಜೊತೆಗೆ ಕುರ್ ಆನ್ ಪಾರಾಯಣ ಪ್ರಾವೀಣ್ಯತೆಯಲ್ಲದೆ, ಸಾಕಷ್ಟು ಕುರ್ ಆನ್ ಕಂಠಪಾಠ (ಹಿಫ್ಲ್) ಕೂಡ ಅವರಿಗಿತ್ತು. ಆಪ್ತರಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಅವರು ಮಾತುಕತೆಯ ಮಧ್ಯೆ ಇಸ್ಲಾಮಿನ ಸಂದೇಶಗಳನ್ನು ತಮ್ಮ ಆಕರ್ಷಕ ಶೈಲಿಯಲ್ಲಿ ಸುಂದರವಾಗಿ ವಿವರಿಸುತ್ತಿದ್ದರು. ಅರಬೀ ವ್ಯಾಕರಣ ಶಾಸ್ತ್ರ ಹಾಗೂ ತಜ್ ವೀದ್(ಕುರ್ ಆನ್ ಪಾರಾಯಣ ಶಾಸ್ತ್ರ) ಕ್ಷೇತ್ರದಲ್ಲಿ ವಿಶೇಷ ಪಾಂಡಿತ್ಯವಿರುವ   ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಇತ್ತೀಚೆಗೆ ಮುರ ಜಮಾತಿನಲ್ಲಿ ಮೀಲಾದುನ್ನಬೀ ಪ್ರಯುಕ್ತ ಆಯೋಜಿಸಲಾಗಿದ್ದ ಆಝಾನ್ ಸ್ಪರ್ಧೆಯಲ್ಲಿ ಅಬ್ದುಲ್ಲ ಉಸ್ತಾದ್ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಸೆಳೆದಿದ್ದರು.

ಅಬ್ದುಲ್ಲ ಮುಸ್ಲಿಯಾರ್,  ಮೂವರು ಗಂಡು ಮಕ್ಕಳಾದ ಸಾದಿಕ್, ಇಸ್ಮಾಯಿಲ್, ಸಫ್ವಾನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



Join Whatsapp