ಐಪಿಎಲ್ 2023 | ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ 991 ಆಟಗಾರರು

Prasthutha|

ಮುಂದಿನ ವರ್ಷ ನಡೆಯಲಿರುವ ಐಪಿಎಲ್’ನ 16ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದೆ.

- Advertisement -

ಭಾರತ ಸೇರಿದಂತೆ 14 ದೇಶಗಳ ಒಟ್ಟು 991 ಆಟಗಾರರು ಮಿನಿ ಹರಾಜು ಪ್ರಕ್ರಿಯೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದು, ಹೆಸರು ನೋಂದಾಯಿಸಿದವರಲ್ಲಿ ಭಾರತೀಯ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. (714). 277 ವಿದೇಶಿ ಆಟಗಾರರಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ 57 ಮತ್ತು ದಕ್ಷಿಣ ಆಫ್ರಿಕಾದ 52 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್’ನ 33, ಇಂಗ್ಲೆಂಡ್’ನ 31, ನ್ಯೂಜಿಲೆಂಡ್’ನ 27, ಶ್ರೀಲಂಕಾದ 23, ಅಪ್ಘಾನಿಸ್ತಾನದ 14, ಐರ್ಲೆಂಡ್’ನ 8, ನೆದರ್ಲ್ಯಾಂಡ್ಸ್’ನ 7, ಬಾಂಗ್ಲಾದೇಶದ 6, ಯುಎಇಯ 5 ಹಾಗೂ ಸ್ಕಾಟ್ಲೆಂಡ್’ನ ಇಬ್ಬರು ಆಟಗಾರರು ಐಪಿಎಲ್’ನ ಭಾಗವಾಗುವ ಆಸಕ್ತಿ ತೋರಿದ್ದಾರೆ.

ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಜೋ ರೂಟ್, ಸ್ಯಾಮ್ ಕರ್ರನ್ ಹಾಗೂ ಮಯಾಂಕ್ ಅಗರ್ವಾಲ್ ದೊಡ್ಡ ಮೊತ್ತಕ್ಕೆ ʻಬಿಕರಿಯಾಗುವʼ ನಿರೀಕ್ಷೆಯಿದೆ. 10 ಫ್ರಾಂಚೈಸಿಗಳು ಒಟ್ಟು 163 ಆಟಗಾರರನ್ನು ಉಳಿಸಿಕೊಂಡಿದ್ದು,  ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯುವ ಮಿನಿ ಹರಾಜಿನಲ್ಲಿ991 ಆಟಗಾರರ ಪೈಕಿ ಗರಿಷ್ಠ 87 ಆಟಗಾರರು ಮಾರಾಟವಾಗುವ ಸಾಧ್ಯತೆಯಿದೆ.

- Advertisement -

ಫ್ರಾಂಚೈಸಿಗಳ ಬಳಿ ಮಿನಿ ಹರಾಜಿಗೆ ಲಭ್ಯವಿರುವ ಮೊತ್ತಗಳ ವಿವಿರ

ಸನ್ರೈಸರ್ಸ್ ಹೈದರಾಬಾದ್: ₹42.25 ಕೋಟಿ.

ಪಂಜಾಬ್ ಕಿಂಗ್ಸ್: ₹32.20 ಕೋಟಿ

ಲಕ್ನೋ ಸೂಪರ್ ಜೈಂಟ್ಸ್: ₹23.35 ಕೋಟಿ

ಮುಂಬೈ ಇಂಡಿಯನ್ಸ್: ₹20.55 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್: ₹20.45 ಕೋಟಿ

ದೆಹಲಿ ಕ್ಯಾಪಿಟಲ್ಸ್: ₹9.45 ಕೋಟಿ

ಗುಜರಾತ್ ಟೈಟಾನ್ಸ್: ₹19.25 ಕೋಟಿ.

ರಾಜಸ್ಥಾನ್ ರಾಯಲ್ಸ್: ₹13.20 ಕೋಟಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹8.75 ಕೋಟಿ.

ಕೋಲ್ಕತ್ತಾ ನೈಟ್ ರೈಡರ್ಸ್: ₹7.05 ಕೋಟಿ.



Join Whatsapp