ಯಾದಗಿರಿ: ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಮತ್ತು ಸಾವರ್ಕರ್ ಕುರಿತ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಟಿಪ್ಪು ಸುಲ್ತಾನ್ ವೃತ್ತದ ಹೆಸರು ಬದಲಾವಣೆಗೆ ನಗರಸಭೆ ಮುಂದಾಗಿದ್ದು, ಟಿಪ್ಪು ಸುಲ್ತಾನ್ ಹೆಸರು ಬದಲಾಗಿ ಸಾವರ್ಕರ್ ವೃತ್ತ ಎಂದು ಮರು ನಾಮಕರಣ ಮಾಡಲಾಗಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಗತಿಪರರು, ವಿವಿಧ ಸಂಘಟನೆಗಳ ಸದಸ್ಯರು ಟಿಪ್ಪು ವೃತ್ತವನ್ನು ತಲುಪಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರಸಭೆ ಕಚೇರಿ ಮುಂದೆ ಘೋಷಣೆ ಕೂಗಿದ್ದಾರೆ.
2010ರಲ್ಲಿ ವೃತ್ತಕ್ಕೆ ಟಿಪ್ಪು ವೃತ್ತ ಹೆಸರಿಡಲು ನಿರ್ಧಾರ ಆಗಿತ್ತು. ಅಂದಿನ ಸಾಮಾನ್ಯ ಸಭೆಯಲ್ಲಿ ಟಿಪ್ಪು ಹೆಸರಿಡಲು ನಿರ್ಧಾರ ಮಾಡಲಾಗಿತ್ತು. ಈಗಿನ ಅಧ್ಯಕ್ಷರು ಸಾವರ್ಕರ್ ಹೆಸರಿಡಲು ಮುಂದಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷರ ವಿರುದ್ಧ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಆರೋಪ ಮಾಡಿದೆ.