ಗುವಾಹಟಿ: ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ನಡೆದ ರ್ಯಾಂಗಿಂಗ್ ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವುದಾಗಿ ದಿಬ್ರುಗಢ ಜಿಲ್ಲಾಧಿಕಾರಿ ಬಿಸ್ವಜಿತ್ ಪೆಗು ತಿಳಿಸಿದ್ದಾರೆ.
ಎಡಿಸಿ ಸಂಘಮಿತ್ರಾ ಬರುವಾ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ.
ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಆನಂದ್ ಶರ್ಮಾ ರ್ಯಾಂಗಿಂಗ್ ನಿಂದ ಪಾರಾಗಲು ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ನಡೆದ ರ್ಯಾಂಗಿಂಗ್ ಘಟನೆಯನ್ನು ಖಂಡಿಸಿದ ಅಸ್ಸಾಂ ಶಿಕ್ಷಣ ಸಚಿವ ಡಾ.ರಾನೋಜ್ ಪೆಗು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಿಬ್ರುಗಢ ವಿಶ್ವವಿದ್ಯಾಲಯ ಪ್ರಾಧಿಕಾರ ಮತ್ತು ಪೊಲೀಸರಿಗೆ ಸೂಚಿಸಿದ್ದರು.