ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಪಕ್ಷದ ಆಸ್ತಿ: ರಾಹುಲ್‌ ಗಾಂಧಿ

Prasthutha|

ಇಂದೋರ್‌: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ  ಸಚಿನ್‌ ಪೈಲಟ್‌ ಇಬ್ಬರೂ ಕಾಂಗ್ರೆಸ್‌ ಪಕ್ಷದ ಆಸ್ತಿ ಎಂದು ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

- Advertisement -

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಾತನಾಡಿದ ಅವರು ಇಬ್ಬರ ನಡುವಿನ ಜಟಾಪಟಿಯಿಂದ ಭಾರತ್‌ ಜೋಡೋ ಯಾತ್ರೆಗೆ ಹಾನಿಯಾಗುವುದಿಲ್ಲ. ಇಬ್ಬರು ನಾಯಕರು ಪಕ್ಷದ ಆಸ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ, ಅಶೋಕ್‌ ಗೆಹ್ಲೋಟ್ ಸಂದರ್ಶನವನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಂಸದ ಜೈರಾಮ್‌ ರಮೇಶ್‌ ಹೇಳಿದ್ದಾರೆ.



Join Whatsapp