ಆರಂಭಿಕ ಆರ್. ಸಮರ್ಥ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್ ತೋರಿದ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು, ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು 4 ವಿಕೆಟ್ ಅಂತರದಲ್ಲಿ ರೋಚಕವಾಗಿ ಮಣಿಸಿದೆ.
ಅಹಮದಾಬಾದ್ನಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್, 235 ರನ್ಗಳಿಗೆ ಆಲೌಟ್ ಆಗಿತ್ತು. ಬಿಗು ಬೌಲಿಂಗ್ ದಾಳಿ ಸಂಘಟಿಸಿದ್ದ ವಿದ್ವತ್ ಕಾವೇರಪ್ಪ, 40 ರನ್ ನೀಡಿ 4 ವಿಕೆಟ್ ಪಡೆದರು. ಸುಲಭ ಗುರಿ ಪಡೆದಿದ್ದರೂ ಗೆಲುವಿಗಾಗಿ ಕರ್ನಾಟಕ 50ನೇ ಓವರ್ವರೆಗೂ ಹೋರಾಟ ಪ್ರದರ್ಶಿಸಬೇಕಾಯಿತು. ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ಮಯಾಂಕ್ ಅಗರ್ವಾಲ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.
ನಿಕಿನ್ ಜೋಸ್ 29, ಮನೀಶ್ ಪಾಂಡೆ 35 ಹಾಗೂ , ಶ್ರೇಯಸ್ ಗೋಪಾಲ್ 42 ರನ್ಗಳಿಸಿದರು. ಮತ್ತೊಂದೆಡೆ ತಾಳ್ಮೆಯ ಇನ್ನಿಂಗ್ಸ್ ಆಡಿದ ಆರಂಭಿಕ ಆರ್. ಸಮರ್ಥ್ 106 ಎಸೆತಗಳನ್ನು ಎದುರಿಸಿ5 ಬೌಂಡರಿಗಳನ್ನೊಳಗೊಂಡ 71 ರನ್ಗಳಿಸಿದರು. ಅಂತಿಮವಾಗಿ ಕರ್ನಾಟಕ 49.2 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 238 ರನ್ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು.
ಬುಧವಾರ ಇದೇ ಮೈದಾನದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಸೌರಾಷ್ಟ್ರ ಸವಾಲನ್ನು ಎದುರಿಸಲಿದೆ.
ಸೋಮವಾರ ನಡೆದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಉಳಿದ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶವನ್ನು ನೋಡುವುದಾದರೆ
ಮಹಾರಾಷ್ಟ್ರ 330/5
ಉತ್ತರ ಪ್ರದೇಶ 272 ಅಲೌಟ್ ( 47.4 ಓವರ್)
ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 58 ರನ್ಗಳ ಜಯ
—
ಸೌರಾಷ್ಟ್ರ 293/8
ತಮಿಳುನಾಡು 249 ಆಲೌಟ್ (48 ಓವರ್)
ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 44 ರನ್ಗಳ ಜಯ
ಜಮ್ಮು ಕಾಶ್ಮೀರ 350/7
ಅಸ್ಸಾಂ 354/3
ಫಲಿತಾಂಶ: ಅಸ್ಸಾಂ ತಂಡಕ್ಕೆ 7 ವಿಕೆಟ್ ಜಯ