ಬೆಂಗಳೂರು, ನ, 27; ಕನ್ನಡೇತರರಿಗೆ ಕನ್ನಡ ಕಲಿಸಲು ವಾರಕ್ಕೆ ಒಂದು ದಿನ ಮೀಸಲಿರಿಸುವಂತೆ ಹಿರಿಯ ಚಿತ್ರ ರಮೇಶ್ ಭಟ್ ಸಲಹೆ ಮಾಡಿದ್ದಾರೆ.
ಕರ್ನಾಟಕ ಯೂಥ್ ವೆಲ್ ಫೇರ್ ಅಸೋಸಿಯೇಷನ್ ನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ 67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣ್ಯರಿಗೆ ಜೀವಮಾನ ಶ್ರೇಷ್ಠ ಸಾಧನೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಭವ್ಯ ಇತಿಹಾಸವಿದೆ. ಕನ್ನಡೇತರರಿಗೆ ದಿನಕ್ಕೆ ಒಂದು ಶಬ್ದ ಕಲಿಸಿದರೂ ಸಹ ಕನ್ನಡಿಗರ ಬದುಕು ಸಾರ್ಥಕವಾಗುತ್ತದೆ. ಕನ್ನಡ ಕಲಿಯಲು ಎಲ್ಲರಿಗೂ ಆಸಕ್ತಿ ಇದ್ದು, ಕಲಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.
ಪರಿಸರ ಮತ್ತು ಪ್ರಾಣಿ ಸಂರಕ್ಷಕ ಸಿಂಹಾದ್ರಿ, ಚಿತ್ರನಟ ರಮೇಶ್ ಭಟ್, ಪತ್ರಕರ್ತರಾದ ನಂಜುಂಡಪ್ಪ.ವಿ. ಕೆ.ವಿ. ಪರಮೇಶ್ ಮತ್ತಿತರರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರನಟ ಗಣೇಶ್ ರಾವ್ ಕಸರ್ಕರ್, ನಟ, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ, ಕರ್ನಾಟಕ ಯೂಥ್ ವೆಲ್ ಫೆರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ರೀನಾಥ್ ಮತ್ತಿತರರು ಪಾಲ್ಗೊಂಡರು.