ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದ್ದ ಯುವಮೋರ್ಚಾ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್

Prasthutha|

ನವದೆಹಲಿ: ಕೆಲ ತಿಂಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದ್ದ ಯುವಮೋರ್ಚಾ ಕಾರ್ಯಕರ್ತನೊಬ್ಬನಿಗೆ ಬಿಜೆಪಿ ಈ ಸಲ ಮಹಾನಗರ ಪಾಲಿಕೆ ಟಿಕೆಟ್ ನೀಡಿದೆ.

- Advertisement -

27 ವರ್ಷದ ಪ್ರದೀಪ್ ತಿವಾರಿ ಬಿಜೆಪಿಯಿಂದ ಟಿಕೆಟ್ ಪಡೆದ ಅಭ್ಯರ್ಥಿಯಾಗಿದ್ದು, ಈತ ಕೇಜ್ರಿವಾಲ್ ಅವರ ಸಿವಿಲ್ ಲೈನ್ಸ್ ನಿವಾಸದ ಹೊರಗಿನ ಗೇಟ್ ಮತ್ತು ಸಿಸಿಟಿವಿ ಧ್ವಂಸಗೊಳಿಸಿ ಬಂಧನಕ್ಕೊಳಗಾಗಿದ್ದ  ಬಿಜೆಪಿ ಯುವಮೋರ್ಚಾದ 8 ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾನೆ.

ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಟೀಕಿಸಿರುವ ಆಪ್, ಬಿಜೆಪಿ ಗೂಂಡಾಗಳನ್ನು ತಯಾರು ಮಾಡುತ್ತಿದೆ. ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯ ಮಾಡುವವರನ್ನು ಬೆಂಬಲಿಸುತ್ತದೆ  ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಹೇಳಿದೆ.

- Advertisement -

ಮುಂಬರುವ ಪಾಲಿಕೆ ಚುನಾವಣೆಯಲ್ಲಿ ತಿವಾರಿ ರಮೇಶ್ ನಗರ ವಾರ್ಡ್ ನಿಂದ ನಾಮಪತ್ರ ಸಲ್ಲಿಸಿದ್ದಾನೆ.

ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಕೇಜ್ರಿವಾಲ್ ಅವರ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭ ಕೇಜ್ರಿವಾಲ್ ನಿವಾಸದ ಗೇಟ್ಗೆ ಕೆಂಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಪ್ರದೀಪ್ ತಿವಾರಿ ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದನು.



Join Whatsapp