ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖ್ ನಿಧನ

Prasthutha|

 ರಾಯಚೂರು: ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖ್ (87) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೀಖ್ ಸೋಮವಾರ  ರಾತ್ರಿ ಕೊನೆಯುಸಿರೆಳೆದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೀಖ್ ಅವರನ್ನು ಹೈದ್ರಾಬಾದ್’ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -

ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖ್ 1988-1994ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಜಿಲ್ಲೆಯಲ್ಲಿ ಜನತಾದಳ ಪಕ್ಷ ಕಟ್ಟಲು ಮುಂದಾಳತ್ವ ವಹಿಸಿದ್ದರು.

ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. ಅವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.



Join Whatsapp