ಉತ್ತರ ಪ್ರದೇಶ: ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್‌ಸಿಂಗ್ ರೂಪನ್ ಅವರು ಸೋಮವಾರ ಅಯೋಧ್ಯೆಗೆ ಭೇಟಿ ನೀಡಿದರು.ರೂಪನ್ ಅವರು ಪತ್ನಿ ಸಂಯುಕ್ತಾ ರೂಪುನ್ ಮತ್ತು ತನ್ನ ದೇಶದ ಅಧಿಕಾರಿಗಳೊಂದಿಗೆ ಲಕ್ನೋದಿಂದ ರಸ್ತೆ ಮಾರ್ಗವಾಗಿ ಇಲ್ಲಿಗೆ ಬಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಯೋಗವು ಹನುಮಾನ್ ಗರ್ಹಿ ದೇವಸ್ಥಾನ, ಪ್ರಸಿದ್ಧ ಕನಕ ಭವನ ದೇವಸ್ಥಾನ ಮತ್ತು ನಿರ್ಮಾಣ ಹಂತದಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿತು.ರಾಮ ಜನ್ಮಭೂಮಿಯಲ್ಲಿ, ದೇವಾಲಯದ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ರೂಪನ್ ಅವರಿಗೆ ತಿಳಿಸಲಾಯಿತು,ಅವರು ಸರಯು ನದಿಯ ದಡಕ್ಕೂ ಭೇಟಿ ನೀಡಿದರು ಎಂದು ಅಧಿಕಾರಿ ಹೇಳಿದರು.
ಬಳಿಕ ಹನುಮಾನ್ ಗರ್ಹಿ ದೇವಸ್ಥಾನ, ಕನಕ ಭವನ ದೇವಸ್ಥಾನ ಮತ್ತು ನಿರ್ಮಾಣ ಹಂತದಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕುರಿತು ರೂಪನ್ ಅವರಿಗೆ ಮಾಹಿತಿ ನೀಡಲಾಯಿತು. ಬಳಿಕ ಸರಯೂ ನದಿ ದಡಕ್ಕೂ ಅವರು ಭೇಟಿ ನೀಡಿದರು ಎಂದು ತಿಳಿದು ಬಂದಿದೆ.