ಕುಂದಾಪುರ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿಗೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಮುಂದುವರಿಸಿದ್ದು, ಕನ್ನಡಕ, ಚಪ್ಪಲಿ, ಬೆಲ್ಟ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಡಾ.ಕೃಷ್ಣಮೂರ್ತಿ ಅವರು ಕುಂದಾಪುರದಿಂದ ಬಸ್ಸಿನಲ್ಲಿ ಸಿದ್ದಾಪುರದ ಕಡೆಗೆ ಸಂಚರಿಸಿದ್ದಾಗ ಅವರ ಕೈಯ್ಯಲ್ಲಿ ಬ್ಯಾಗ್ ಇದ್ದದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆದರೆ ಅದು ಇನ್ನೂ ಪತ್ತೆಯಾಗಿಲ್ಲ.
ನ. 8ರಂದು ಬದಿಯಡ್ಕದ ತಮ್ಮ ಕ್ಲಿನಿಕ್ನಿಂದ ನಾಪತ್ತೆಯಾಗಿದ್ದ ವೈದ್ಯರ ಛಿದ್ರಗೊಂಡ ದೇಹವು ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ನ. 9ರಂದು ಪತ್ತೆಯಾಗಿತ್ತು. ನ. 10ರಂದು ಅವರ ಪುತ್ರಿಯ ಸಹಿತ ಕುಟುಂಬಿಕರು ಮೃತದೇಹವನ್ನು ಗುರುತಿಸಿದ್ದರು.