ಚಿಕ್ಕಮಗಳೂರು: ಬಿಲ್ ಪಾವತಿಸಲು ಕಮಿಷನ್ ಬೇಡಿಕೆ; ತಾ.ಪಂ ಪ್ರಭಾರ E.O ಅಮಾನತು

Prasthutha|

ಕಡೂರು: ಕೋವಿಡ್ ಅವಧಿಯಲ್ಲಿ ಪರಿಕರಗಳನ್ನು ಪೂರೈಕೆ ಮಾಡಿದ್ದ ಗುತ್ತಿಗೆದಾರನಿಗೆ ಬಿಲ್ ಸಂದಾಯ ಮಾಡಲು ಕಮಿಷನ್ ಬೇಡಿಕೆ ಇಟ್ಟಿದ್ದ ಆರೋಪದ ಕುರಿತು, ಜಿ.ಪಂ ಸಿಇಒ ಅವರು ನೀಡಿದ ವರದಿ ಆಧರಿಸಿ ತಾ.ಪಂ ಪ್ರಭಾರ ಇಒ ಡಾ.ದೇವರಾಜ್ ನಾಯಕ್ ರನ್ನು ಅಮಾನತು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

- Advertisement -


ಕೋವಿಡ್‌ ಪರಿಕರ ಪೂರೈಕೆ ಬಿಲ್‌ ಪಾವತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸೂಚನೆ ನೀಡಿ ಒಂದು ವರ್ಷವಾದರೂ ಕ್ರಮವಹಿಸದಿರುವುದು, ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಬಿಲ್‌ ಪಾವತಿಸಲು ನಿರ್ದೇಶನ ನೀಡಿ ಅಗತ್ಯ ಕ್ರಮವಹಿಸದೆ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಕಡೂರು ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್‌ ಪರಿಕರ ಪೂರೈಕೆ ಮಾಡಿದ ಬಿಲ್‌ ಪಾವತಿಸಲು ದೇವರಾಜ್ ನಾಯಕ್‌ ಅವರು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್‌ ಅಮರಗೋಳ ಆರೋಪಿಸಿದ್ದಾರೆ.



Join Whatsapp