ಗಾಝಾದ ಜಬಲಿಯಾ ನಿರಾಶ್ರಿತರ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ: 21 ಮಂದಿ ಮೃತ್ಯು, ಹಲವರಿಗೆ ಗಾಯ

Prasthutha|

ಗಾಝಾ: ಗಾಝಾದ ಕಟ್ಟಡವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಕನಿಷ್ಠ 21 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಆರೋಗ್ಯ ಮತ್ತು ನಾಗರಿಕ ತುರ್ತು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

- Advertisement -

ಉತ್ತರ ಗಾಝಾದ ಜಬಲಿಯಾ ನಿರಾಶ್ರಿತರ ಶಿಬಿರದಲ್ಲಿ ಇಡೀ ವಸತಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಟ್ಟಡದ ಒಳಗಿನಿಂದ ಸಂತ್ರಸ್ತರು ಕಿರುಚಾಡುತ್ತಿರುವ ಶಬ್ಧ ಕೇಳಿಸುತ್ತಿತ್ತು. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದರಿಂದ ಸಹಾಯ ಮಾಡಲು ಮತ್ತು ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

- Advertisement -

ಗಾಜಾದಲ್ಲಿನ ಎಂಟು ನಿರಾಶ್ರಿತರ ಶಿಬಿರಗಳಲ್ಲಿ ಜಬಲಿಯಾ ಶಿಬಿರ ಅತ್ಯಂತ ದೊಡ್ಡ ಶಿಬಿರವಾಗಿದ್ದು, ಇಲ್ಲಿ 35,000 ಜನರು ವಾಸಿಸುತ್ತಿದ್ದಾರೆ. ಇದು ಎರಡು ಮಿಲಿಯನ್ ಜನರಿಗೆ ನೆಲೆ ಒದಗಿಸಿದ್ದು, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.

ಕಟ್ಟಡದಲ್ಲಿ ದೊಡ್ಡ ಪ್ರಮಾಣದ ಗ್ಯಾಸೋಲಿನ್ ಸಂಗ್ರಹಿಸಿಟ್ಟಿರುವುದು ದುರಂತಕ್ಕೆ ಕಾರಣ  ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.



Join Whatsapp