ಜ್ಞಾನವಾಪಿ ಪ್ರಕರಣ: ಮಸೀದಿ ಆಡಳಿತ ಸಮಿತಿಯ ಅರ್ಜಿ ವಜಾ

Prasthutha|

ವಾರಣಾಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಗವಾನ್ ವಿಶ್ವೇಶ್ವರ ವಿರಾಜಮಾನ (ಸ್ವಯಂಭು) ಮತ್ತು ಇತರರಿಗೆ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಪ್ರಶ್ನಿಸಿ ಅಂಜುಮನ್ ಮಸೀದಿ ಸಮಿತಿಯ ಮನವಿಯನ್ನು ಇಲ್ಲಿನ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.

- Advertisement -

ಮಸೀದಿ ಆಡಳಿತ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದ ಸಿವಿಲ್ ನ್ಯಾಯಾಧೀಶ ಮಹೇಂದ್ರ ಕುಮಾರ್ ಪಾಂಡೆ ಅವರ ತ್ವರಿತ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ.

ಅಕ್ಟೋಬರ್ 27 ರಂದು ಈ ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು.

- Advertisement -

ವಿಶ್ವವೇದಿಕ ಸನಾತನ ಸಂಘದ (ವಿವಿಎಸ್‌ಎಸ್) ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕಿರಣ್ ಸಿಂಗ್ ಮೂಲಕ ಲಾರ್ಡ್ ವಿಶ್ವೇಶ್ವರ್ ವಿರಾಜಮಾನ್ (ಸ್ವಯಂಭು) ಅವರ ಪರವಾಗಿ ಮೊಕದ್ದಮೆ ಹೂಡಿದ್ದಾರೆ ಎಂಬುದನ್ನು ಗಮನಿಸಬಹುದು.

ಇಡೀ ಜ್ಞಾನವಾಪಿ ಸಂಕೀರ್ಣದ ಸ್ವಾಧೀನವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಮತ್ತು ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಮೇ 16ರಂದು ಮಸೀದಿ ಆವರಣದಲ್ಲಿ ಕಂಡು ಬಂದಿರುವ ‘ಶಿವಲಿಂಗ’ವನ್ನು ಪೂಜಿಸಲು ಫಿರ್ಯಾದಿದಾರರಿಗೆ ಅವಕಾಶ ನೀಡಬೇಕೆಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ.

ಜ್ಞಾನವಾಪಿ ಮಸೀದಿ ಆವರಣದೊಳಗೆ ವರ್ಷ ಪೂರ್ತಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಕೋರಿ 5 ಹಿಂದೂ ಮಹಿಳಾ ಆರಾಧಕರು ವಾರಣಾಸಿ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಗೂ, ಬಾಕಿ ಉಳಿದಿರುವ ಮತ್ತೊಂದು ಮೊಕದ್ದಮೆಯೊಂದಿಗೆ ಇದಕ್ಕೂ ಸಂಬಂಧಿಸಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.



Join Whatsapp