ಮೆಟಾ ಭಾರತೀಯ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ನೇಮಕ

Prasthutha|

ನವದೆಹಲಿ: ದೈತ್ಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಮೆಟಾ ಸಂಸ್ಥೆ ಸಂಧ್ಯಾ ದೇವನಾಥನ್ ಅವರನ್ನು ಮೆಟಾ ಇಂಡಿಯಾದ ಉಪಾಧ್ಯಕ್ಷರಾಗಿ ನೇಮಿಸಿದೆ ಎಂದು ಕಂಪೆನಿ ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಅನ್ನು ಹೊಂದಿರುವ ಮೆಟಾಗೆ ರಾಜೀನಾಮೆ ನೀಡಿದ ಅಜಿತ್ ಮೋಹನ್ ಅವರ ಸ್ಥಾನಕ್ಕೆ ಸಂಧ್ಯಾ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಮೆಟಾದ ಮುಖ್ಯ ವ್ಯವಹಾರಾಧಿಕಾರಿ ಮಾರ್ನೆ ಲೆವಿನ್, ಭಾರತಕ್ಕೆ ಹೊಸ ಮುಖ್ಯಸ್ಥೆಯಾಗಿ ಸಂಧ್ಯಾ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಸಂಧ್ಯಾ ಅವರು ಭಾರತದಲ್ಲಿ ವ್ಯವಹಾರ ನಿರ್ವಹಣೆ, ತಂಡಗಳ ರಚನೆ, ಉತ್ಪನ್ನದ ಆವಿಷ್ಕಾರಕ್ಕೆ ಚಾಲನೆ ನೀಡುವುದು ಮತ್ತು ಪಾಲುದಾರಿಕೆಗಳನ್ನು ನಿರ್ಮಾಣ ಮಾಡುವಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದ್ದಾರೆ ಎಂದು ತಿಳಿಸಿದ್ದಾರೆ.

ದೇವನಾಥನ್ ಅವರು 2016 ರಲ್ಲಿ ಮೆಟಾ ಸಂಸ್ಥೆಯನ್ನು ಸೇರ್ಪಡೆಯಾಗಿದ್ದು, ಸಿಂಗಾಪುರ್ ಮತ್ತು ವಿಯೆಟ್ನಾಂನಲ್ಲಿ ವ್ಯವಹಾರ ನಿರ್ವಹಣೆ ಮತ್ತು ತಂಡಗಳನ್ನು ರಚಿಸಿದ್ದರು. ಅಲ್ಲದೆ ಆಗ್ನೇಯ ಏಷ್ಯಾದಲ್ಲಿ ಮೆಟಾದ ಇ-ಕಾಮರ್ಸ್ ಉಪಕ್ರಮಗಳನ್ನು ನಿರ್ಮಿಸಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.

- Advertisement -

2020 ರಲ್ಲಿ ಸಂಧ್ಯಾ ಅವರು APAC ಗೇಮಿಂಗ್ ಅನ್ನು ಮುನ್ನಡೆಸಲು ಇಂಡೋನೇಷ್ಯಾಕ್ಕೆ ತೆರಳಿದರು. ಇದು ಜಾಗತಿಕವಾಗಿ ಮೆಟಾದ ಅತಿದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಕಂಪೆನಿ ತಿಳಿಸಿದೆ.

ಸಂಧ್ಯಾ ಅವರು ಜನವರಿ 1, 2023 ರಂದು ತಮ್ಮ ಹೊಸ ಹುದ್ದೆಗೆ ನೇಮಕಾತಿಯಾಗುತ್ತಾರೆ ಮತ್ತು ಮೆಟಾದ ಎಪಿಎಸಿ ಉಪಾಧ್ಯಕ್ಷ ಡಾನ್ ಅವರ ಅಧೀನದಲ್ಲಿರುತ್ತಾರೆ. ಅಲ್ಲದೆ ಎಪಿಎಸಿ ನಾಯಕತ್ವ ತಂಡದ ಭಾಗವಾಗಿರುತ್ತಾರೆ.

ಸದ್ಯ ಅವರನ್ನು ಮೆಟಾ ಭಾರತೀಯ ಉಪಾಧ್ಯಕ್ಷೆಯಾಗಿ ನೇಮಕಗೊಳಿಸಿ ಆದೇಶ ನೀಡಿದೆ.



Join Whatsapp