ಮಂಗಳೂರು: ಬದುಕಲು ಬಿಡಿ ಮತ್ತು ಆರಕ್ಷಕರ ಕಿರುಕುಳ ನಿಲ್ಲಿಸಿ ಎಂದು ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಮಂಗಳೂರಿನ ಆರ್’ಟಿಓ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ವಿಮಾನ ನಿಲ್ದಾಣಕ್ಕೆ ನೇರ ಪ್ರವೇಶ ನೀಡಿ, ಕೆಎಸ್’ಆರ್ಟಿಸಿ ಪ್ಯಾಕೇಜ್ ಟೂರ್ ನಿಲ್ಲಿಸಿ, ಲಿಕ್ಕರ್ ಮಾಫಿಯಾದವರ ತೊಂದರೆ ನಿಲ್ಲಿಸಿ, ಟೂರಿಸ್ಟ್ ಟ್ಯಾಕ್ಸಿಗಳ ಬಾಡಿಗೆ ಕಾಪಾಡಿರಿ, ಗ್ರಾಮೀಣ ಆಟೋಗಳಿಗೆ ನಗರ ಪ್ರವೇಶ ತಡೆಯಿರಿ ಇತ್ಯಾದಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಆನಂದ್ ಕೆ. ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.