ವ್ಯಾಪಕ ವಿರೋಧಗಳ ಬಳಿಕ ಮಸೀದಿ ಮಾದರಿಯ ಬಸ್ ನಿಲ್ದಾಣವು ಹಿಂದೂ ಧಾರ್ಮಿಕ ಅಸ್ಮಿತೆಯ ರೂಪಕ್ಕೆ ಬದಲಾವಣೆ

Prasthutha|

  • ►ಒಳಗಡೆ ಚಾಮುಂಡೇಶ್ವರಿ ದೇವಸ್ಥಾನದ ಗೋಪುರದ ಫೋಟೋ ಅಳವಡಿಕೆ

ಮೈಸೂರು: ಮಸೀದಿ ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಕ್ಕೆ ಹಲವು ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ಇದೀಗ ಅದರ ರೂಪವನ್ನು ಬದಲಾಯಿಸಲಾಗಿದೆ.

- Advertisement -

ಈ ನಡೆಯನ್ನು ಕಟುವಾಗಿ ವಿರೋಧಿಸಿದ ಸಂಸದ ಪ್ರತಾಪ್ ಸಿಂಹ, ಗುತ್ತಿಗೆದಾರರು ಮಸೀದಿ ಗೋಪುರ ಹೋಲುವ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಇದನ್ನು ಬದಲಿಸಲು 3 ದಿನಗಳ ಗಡುವು ನೀಡಿದ್ದೇನೆ. ಬದಲಿಸದಿದ್ದರೆ, ಜೆಸಿಬಿ ತರಿಸಿ ಕೆಡವಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು.

ಇದೇನು ಪಾಕಿಸ್ತಾನವಾ ? ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ನಿಲ್ದಾಣ ವಿನ್ಯಾಸ ಬದಲಾಯಿಸಲಾಗಿದೆ.

- Advertisement -

ಮಸೀದಿ ಹೋಲುವ ಗುಮ್ಮಟದ ವಿನ್ಯಾಸದ ಮೇಲೆ ಕಳಶಗಳನ್ನು ಜೋಡಿಸಿ, ಹಿಂದೂ ಧಾರ್ಮಿಕ ಅಸ್ಮಿತೆಯ ರೂಪವನ್ನು ನೀಡಲಾಗಿದೆ. ಬಸ್ ನಿಲ್ದಾಣದ ಒಳಗಡೆ ಮೈಸೂರು ಅರಮನೆ, ರಾಮದಾಸ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಗೋಪುರದ ಫೋಟೊಗಳನ್ನು ಅಳವಡಿಸಲಾಗಿದೆ.



Join Whatsapp