ಬೆಂಗಳೂರು: ಜನತಾ ಪಕ್ಷದ ವತಿಯಿಂದ ಕೇಂದ್ರ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ಡಾ. ಬಿ.ಟಿ. ಲಲಿತಾನಾಯಕ್ ರವರ ನೇತೃತ್ವದಲ್ಲಿ ಹಜರತ್ ಟಿಪ್ಪು ಸುಲ್ತಾನ್ 271ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಹುಸೇನ್ ಸಾಬ್ ಕೆರೂರು ವಹಿಸಿದ್ದರು.
ಈ ಸಂದರ್ಭದಲ್ಲಿ ದೇಶಕ್ಕೆ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆಗಳನ್ನು ವಿವರಿಸಿದ ಅವರು, ಕರ್ನಾಟಕದಲ್ಲಿ ರೇಷ್ಮೆ ಕೃಷಿ ಪದ್ಧತಿಯನ್ನು ಮೊದಲು ಟಿಪ್ಪು ಸುಲ್ತಾನ್ ಅವರು ಬಳಕೆಗೆ ತಂದರು. ಪ್ರಸ್ತುತ ಕನ್ನಂಬಾಡಿ ಅಣೆಕಟ್ಟು ಇರುವ ಸ್ಥಳದಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ಕ್ರಿ.ಶ 1794ರಲ್ಲಿ ಪ್ರಥಮ ಬಾರಿಗೆ ನೀಲಿ ನಕ್ಷೆ ತಯಾರಿಸಿದ ಖ್ಯಾತಿಯೂ ಟಿಪ್ಪು ಸುಲ್ತಾನ್ ಅವರಿಗೆ ಸಲ್ಲುತ್ತದೆ. ಪ್ರಪಂಚದ ಮೊದಲ ಕ್ಷಿಪಣಿ ತಂತ್ರಜ್ಞಾನವನ್ನು ಕೊಡುಗೆ ನೀಡಿದ್ದು ಟಿಪ್ಪು ಸುಲ್ತಾನ್ ಅವರು ಎಂದರು.
ತನ್ನ ಜೀವನದ ಬಹುಭಾಗದ ಆಯಸ್ಸನ್ನು ಯುದ್ಧರಂಗಕ್ಕೆ ಮುಡಿಪಿಟ್ಟು, ರಾಜ್ಯವನ್ನು ಅಕ್ರಮಣ ಮಾಡಲು ಬಂದವರ ವಿರುದ್ಧ ಎಲ್ಲಿಯೂ ರಾಜಿಯಾಗಲಿಲ್ಲ. ತಾಯಿ ನೆಲದ ರಕ್ಷಣೆಗಾಗಿ ಹಗಲಿರುಳು ನಿರಂತರ ಯುದ್ಧ ಮಾಡಿ ತನ್ನ ಸ್ವಾಭಿಮಾನದ ಹೋರಾಟ ಸಂದರ್ಭದಲ್ಲಿ ಯುದ್ಧ ಭೂಮಿಯಲ್ಲಿ ವೀರ ಮರಣ ಹೊಂದಿದ್ದ ಟಿಪ್ಪು ಸುಲ್ತಾನ್ ಇಂದಿನ ಯುವ ಜನತೆಗೆ ಆದರ್ಶವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಇಮ್ತಾಜ್ ಮಹಮ್ಮದ್ ಅತ್ತರ್ , ರಾಜ್ಯ ಉಪಾಧ್ಯಕ್ಷರಾದ ರಫೀಕ್ ಓಕೆ, ರಾಜ್ಯ ಸಂಘಟನಾ ಕಾರ್ಯ ಸೈಯದ್ ಶಫೀಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ನಳಿನಿ ಗೌಡ ಉಪಸ್ಥಿತರಿದ್ದರು.