ಮಿಕೋಲಾಯಿವ್: ನಮ್ಮ ವಿರುದ್ಧ ದಬ್ಬಾಳಿಕೆ ನಡೆಸಿರುವ ಯಾವುದನ್ನೂ ಮರೆಯಲ್ಲ. ರಷ್ಯಾವನ್ನು ಮಣಿಸಿಯೇ ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ.
ರಷ್ಯಾ ಸೇನೆಯನ್ನು ದೇಶದಿಂದ ಸಂಪೂರ್ಣವಾಗಿ ತೊಲಗಿಸುತ್ತೇವೆ. ನಮ್ಮ ಸೇನಾ ಪಡೆಯು ರಷ್ಯಾದ ಕಪಿಮುಷ್ಟಿಯಿಂದ ನಮ್ಮ ಪ್ರದೇಶಗಳನ್ನು ಮುಕ್ತಗೊಳಿಸಲಿದ್ದಾರೆ. ನಾವು ನಮ್ಮ ಯಾವುದೇ ಪ್ರಜೆಗಳನ್ನು ಕೈಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆರ್ಸಾನ್ ಪ್ರದೇಶದಲ್ಲಿ ರಷ್ಯಾವು ತನ್ನ ಸೇನಾಪಡೆಯನ್ನು ಮರಳಿ ಕರೆಸಿಕೊಂಡ ಬಳಿಕ ಈ ಪ್ರದೇಶಕ್ಕೆ ಮರಳಿರುವ ಸ್ಥಳೀಯರು ಪರಸ್ಪರ ಅಪ್ಪಿಕೊಂಡು ಉಕ್ರೇನ್‌ನ ಧ್ವಜ ಹಿಡಿದು ಸಂಭ್ರಮಿಸಿದ್ದರು. ಈ ಬಳಿಕ ವಿಡಿಯೋ ಭಾಷಣ ಮಾಡಿ ಝೆಲೆನ್ಸ್ಕಿ ಈ ಬಗೆಯಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಕೆರ್ಸಾನ್ ಪ್ರದೇಶವನ್ನು ಮರು ವಶಪಡಿಸಿಕೊಂಡಿರುವುದು ರಷ್ಯಾ ಸೇನೆಗೆ ದೊಡ್ಡ ಹಿನ್ನಡೆಯಾಗಿ ಕಂಡಿದೆ ಎಂದೂ ಅವರು ಹೇಳಿದ್ದಾರೆ.