ಪ್ಯಾರಿಸ್: ‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ನಿರಾಶ್ರಿತ ಮೆಹರಾನ್ ಕರಿಮಿ ನಾಸ್ಸರಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
77 ವರ್ಷದ ನಾಸ್ಸರಿ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ 2004ರಲ್ಲಿ ಬಿಡುಗಡೆಯಾಗಿದ್ದ ‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದರು. ಅವರು 18 ವರ್ಷ ಪ್ಯಾರಿಸ್‌ನ ಚಾರ್ಲ್ಸ್ ಡಿ ಗುಲ್ಲೆ ವಿಮಾನ ನಿಲ್ದಾಣದಲ್ಲೇ ವಾಸವಾಗಿದ್ದರು ಎನ್ನಲಾಗಿದೆ.
ನಾಸ್ಸರಿ ಅವರ ತಂದೆ ಇರಾನ್ ಮೂಲದವರು. ತಾಯಿ ಬ್ರಿಟಿಷ್. 1974 ರಲ್ಲಿ ಇಂಗ್ಲೆಂಡ್‌ಗೆ ತೆರಳಿ ವಿದ್ಯಾಭ್ಯಾಸ ಮುಗಿಸಿ ವಾಪಸ್ ಇರಾನ್‌ಗೆ ಬಂದಾಗ ನಾಸ್ಸರಿಗೆ ಆಘಾತ ಕಾದಿತ್ತು.
ಇರಾನ್ ಅಧ್ಯಕ್ಷರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾಸರಿ ಅವರನ್ನು ಇರಾನ್‌ನಿಂದ ಗರಿಪಾರು ಮಾಡಲಾಗಿತ್ತು. ಈ ವೇಳೆ ಅವರು ತಮ್ಮ ದಾಖಲಾತಿಗಳನ್ನು ಕಳೆದುಕೊಂಡಿದ್ದರು. ತಾಯಿಯನ್ನು ಹುಡುಕುತ್ತಾ ಹೋದ ಅವರಿಗೆ ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ನೆದರ್ಲೆಂಡ್ ಸೇರಿದಂತೆ ಯಾವುದೇ ದೇಶಗಳು ಆಶ್ರಯ ನೀಡಲಿಲ್ಲ. ಕಡೆಗೆ ಅವರ ತಾಯಿಯೂ ಸಿಗಲಿಲ್ಲ.
ನಂತರ ನಾಸ್ಸರಿ ಪ್ರಾನ್ಸ್‌ನ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2ನಲ್ಲೇ 19978 ರಿಂದ 2006ವರೆಗೆ 18 ವರ್ಷ ತಂಗಿದ್ದರು.