ಬೆಂಗಳೂರು: ಜಿಲ್ಲೆಯ ಹಲವು ಕಡೆಯ ರಸ್ತೆಗಳಲ್ಲಿ ವ್ಯಾಪಕಗೊಂಡಿರುವ ಗುಂಡಿಗಳ ಪರಿಣಾಮ ವಾಹನ ಸವಾರರು ಸಂಚಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆ ಗುಂಡಿಯ ವಿರುದ್ಧ ಇಲ್ಲೊಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಪೀಣ್ಯ ನಿವಾಸಿ ಎಸ್ ಸುಗುಣ ಎಂಬುವವರು ನಂದಿನಿ ಲೇ ಔಟ್ ನಿಂದ ಅಕ್ಟೋಬರ್ 16_ರಂದು ತನ್ನ ಬೈಕ್ ನಲ್ಲಿ ಸಂಚರಿಸುವಾಗ ಹಲಸೂರು ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದ ಪರಿಣಾಮ ಬೈಕ್ ಉರುಳಿ ಬಿದ್ದಿದ್ದರು. ಇದರಿಂದ ಆಕ್ರೋಶಿತರಾದ ಸುಗುಣ ಇಂದು ಬಿದ್ದ ಅದೇ ಗುಂಡಿಯ ಬಳಿ ಅರ್ಧ ದಿನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.
ಸುಗುಣ ಅವರು ಅಕ್ಟೋಬರ್ 16ರಂದು ನಂದಿನಿ ಲೇಔಟ್ನಿಂದ ಮರಳುತ್ತಿದ್ದಾಗ ತಮ್ಮ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ದೊಡ್ಡ ರಸ್ತೆಗುಂಡಿಗೆ ದ್ವಿಚಕ್ರ ವಾಹನದ ಚಕ್ರ ಇಳಿದು ಆಯತಪ್ಪಿ ಬಿದ್ದಿದ್ದರು.
ಈ ಪರಿಣಾಮ ಸುಗುಣ ಅವರು 15 ದಿನಗಳ ಆಸ್ಪತ್ರೆ ಚಿಕಿತ್ಸೆಗೆ ₹7.5 ಲಕ್ಷ ಶುಲ್ಕ ಭರಿಸಬೇಕಾಗಿ ಬಂತು. ಆರು ವಾರ ವಿಶ್ರಾಂತಿ ಪಡೆಯಬೇಕಾದ ಸ್ಥಿತಿ ತಲುಪಿದ್ದರು ಎನ್ನಲಾಗಿದೆ.