ಟೋಲ್ ಗೇಟ್ ನಿಂದ ಶೇಕಡಾ 100ರಷ್ಟು ಕಮಿಷನ್: ಮಧು ಬಂಗಾರಪ್ಪ

Prasthutha|

ಮಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಮಿಕರ ಪರವಾಗಿದ್ದ 44 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಲಾಗಿದ್ದು, ಇದರಿಂದ 14 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ. ಕೆಲವೇ ಕೆಲವು ಉದ್ಯಮಿಗಳ ಪರ ಮೋದಿ ಸರಕಾರ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕೆಪಿಸಿಸಿಯ ಎಲ್ಲ ಘಟಕಗಳನ್ನು ಬಲಪಡಿಸಿದ್ದಾರೆ. ಕೆಪಿಸಿಸಿ ಕಾರ್ಮಿಕ ಘಟಕವನ್ನು ಕೂಡ ಪುನರ್ರಚಿಸಿದ್ದಾರೆ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಇಂದು ಬೆಳಿಗ್ಗೆ ನಮ್ಮ ಕಾರ್ಮಿಕ ವಿಭಾಗವು ಉದ್ಯೋಗ ವಂಚಿತರ ಪರವಾಗಿ ಕಾರ್ಯಕ್ರಮ ನಡೆಸಿದೆ. ಎಲ್ಲ ಕಾಂಗ್ರೆಸ್ ನಾಯಕರು ಅದರಲ್ಲಿ ಪಾಲ್ಗೊಂಡಿದ್ದರು. ಇನ್ನು ಆ ಟೋಲ್ ಗೇಟ್ ಯಾಕೆ ಇಟ್ಟುಕೊಂಡಿದ್ದಾರೆ? ಹೆಣ್ಣು ಮಕ್ಕಳನ್ನು ಬೆದರಿಸುವ ಸಂಘ ಪರಿವಾರದ ಹೀನ ಕೆಲಸ ನಡೆಯದು. ಈ ಟೋಲ್ ನಲ್ಲಿ 40% ಅಲ್ಲ ನೂರು ಶೇಕಡಾವೇ ಬರುತ್ತಿರಬೇಕು. ಹೆದ್ದಾರಿ ಮಂತ್ರಿ ಹೇಳಿದರೂ ಅದು ನಿಲ್ಲದು. ಅದರ ಹಣ ಧಾರ್ಮಿಕ ಧ್ರುವೀಕರಣಕ್ಕೆ ಹೋಗುತ್ತದೆ ಎಂದು ಅವರು ಹೇಳಿದರು.

- Advertisement -

ಕಾಂಗ್ರೆಸ್ ಭೂ ಹಕ್ಕನ್ನು ಹಿಂದುಳಿದವರಿಗೆ ನೀಡಿದೆ. ಆರಾಧನಾದಂಥ ಯೋಜನೆಗಳು ದುರ್ಬಲರ ಆಲಯಗಳಿಗೆ ಹೋಗುತ್ತಿತ್ತು. ಬಿಜೆಪಿ ಯಾರಿಗೆ ಕೊಡುತ್ತಿದೆ? ಅವರಿಗೆ ಬಡವರಿಗೆ ಒಂದು ಮನೆ ಕೊಡಲು ಆಗಿಲ್ಲ. ನಮ್ಮ ಸರಕಾರ ಹುಡುಕಿ ಹುಡುಕಿ ಕೊಟ್ಟಿತ್ತು. ಎಲ್ಲ ಜನರಿಗೆ ಅಧಿಕಾರ ಹಂಚಿಕೆ ನಮ್ಮ ಪಕ್ಷದ ಕೆಲಸ. ದಕ ಜಿಲ್ಲಾ ಹಿಂದುಳಿದ ವರ್ಗದ ವಿಶ್ಚಾಸ್ ದಾಸ್ ತೀರಾ ಹಿಂದುಳಿದ ವರ್ಗದವರು ಎಂದು ಮಧು ಬಂಗಾರಪ್ಪ ಹೇಳಿದರು.

ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಹಿಂದುಳಿದವರ ಒಂದು ಸಮಾವೇಶ ದಕ್ಷಿಣ ಕನ್ನಡದಲ್ಲಿ ನಡೆಯುತ್ತದೆ. ಆಮೇಲೆ ರಾಜ್ಯ ಮಟ್ಟದಲ್ಲಿ ನಡೆಯುತ್ತದೆ. ನಾನು ಪ್ರಣಾಳಿಕೆ ಸಮಿತಿಯ ಸದಸ್ಯನೂ ಆಗಿದ್ದೇನೆ. ನಾವು ಧರ್ಮದ ಹೆಸರಿನಲ್ಲಿ ಮತ ಹೇಳುವುದಿಲ್ಲ. ಕೆಲಸದ ಮೇಲೆ ಮತ ಕೇಳುವ ಪ್ರಣಾಳಿಕೆ ರಚಿಸುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಮೊದಲು ಡಿಕೆಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಮುಖಂಡರಾದ ಪ್ರತಿಭಾ ಕುಳಾಯಿ, ಅಬ್ದುಲ್ ರೆಹಮಾನ್, ಲಾರೆನ್ಸ್ ಮೊದಲಾದವರು ಉಪಸ್ಥಿತರಿದ್ದರು.



Join Whatsapp