ಟಿ20 ಕ್ರಿಕೆಟ್‌ | ತ್ರಿಕೋನ ಸರಣಿಯ ವೇಳಾಪಟ್ಟಿ ಪ್ರಕಟ

Prasthutha|

ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳನ್ನು ಒಳಗೊಂಡ ಟಿ20 ತ್ರಿಕೋನ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಜನವರಿ 19 ರಿಂದ ಫೆಬ್ರವರಿ 2ರವರೆಗೆ ಪೂರ್ವ ಲಂಡನ್‌ನಲ್ಲಿರುವ ಬಫಲೋ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ 3 ತಂಡಗಳು ತಲಾ 2 ಪಂದ್ಯಗಳಂತೆ ಒಟ್ಟು 6 ಪಂದ್ಯಗಳನ್ನಾಡಲಿದೆ.

- Advertisement -

2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ 26 ರವರೆಗೆ ಕೇಪ್‌ಟೌನ್, ಪಾರ್ಲ್ ಮತ್ತು ಜಿಕೆಬೆರ್ಹಾದಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯಲಿದೆ.  ಈ ಹಿನ್ನಲೆಯಲ್ಲಿ ಹರಿಣಗಳ ನೆಲದಲ್ಲಿ ಆಯೋಜನೆಯಾಗಿರುವ ಟಿ20 ಸರಣಿ ಮೂರೂ ತಂಡಗಳಿಗೆ ಪೂರ್ವ ತಯಾರಿಗೆ ಉತ್ತಮ ವೇದಿಕೆ ಒದಗಿಸಿದೆ.

ವೆಸ್ಟ್ ಇಂಡೀಸ್ ತಂಡವು 2016ರಲ್ಲಿ ಟಿ20 ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.  ಭಾರತವು 2020ರ ಆವೃತ್ತಿಯಲ್ಲಿ ಫೈನಲ್‌ ತಲುಪಿತ್ತಾದರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು.

- Advertisement -

ಮುಂಬರುವ ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಐದು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡಗಳಿದ್ದರೆ, ಗ್ರೂಪ್‌ 2ರಲ್ಲಿ ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿವೆ .

ತ್ರಿಕೋನ ಸರಣಿಯ ವೇಳಾಪಟ್ಟಿ

ಜನವರಿ 19: ಭಾರತ vs ದಕ್ಷಿಣ ಆಫ್ರಿಕಾ

ಜನವರಿ 21 ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್

ಜನವರಿ 23 ಭಾರತ vs ವೆಸ್ಟ್ ಇಂಡೀಸ್

ಜನವರಿ 25: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್

ಜನವರಿ 28: ಭಾರತ vs ದಕ್ಷಿಣ ಆಫ್ರಿಕಾ

ಜನವರಿ 30: ಭಾರತ vs ವೆಸ್ಟ್‌ ಇಂಡೀಸ್

ಫೆಬ್ರವರಿ 2: ಫೈನಲ್



Join Whatsapp