ಸೌರಶಕ್ತಿಯಿಂದ ವಿದ್ಯುತ್‌ ಮೂಲಕ ಇಂಧನ ವೆಚ್ಚದಲ್ಲಿ ದೇಶಕ್ಕೆ ಭಾರೀ ಉಳಿತಾಯ: ವರದಿ

Prasthutha|

ನವದೆಹಲಿ: ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಿ ಕಳೆದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಇಂಧನದ ವೆಚ್ಚದಲ್ಲಿ 34 ಸಾವಿರ ಕೋಟಿಗೂ ರೂ.ಗೂ ಅಧಿಕ ಉಳಿತಾಯ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ. ಅಲ್ಲದೆ,1.94 ಕೋಟಿ ಟನ್‌ಗಳಷ್ಟು ಕಲ್ಲಿದ್ದಲನ್ನು ಸಹ ಉಳಿತಾಯ ಮಾಡಲಾಗಿದೆ ಎಂದೂ ಅದು ಹೇಳಿದೆ.

- Advertisement -

ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಾದ ಇಎಂಬಿಇಆರ್‌, ಸೆಂಟರ್‌ ಫಾರ್ ರಿಸರ್ಚ್‌ ಆನ್‌ ಎನರ್ಜಿ ಅಂಡ್ ಕ್ಲೀನ್‌ ಏರ್‌ ಹಾಗೂ ಇನ್ಸ್‌ಟಿಟ್ಯೂಟ್‌ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಲಿಸಿಸ್ (ಐಇಇಎಫ್‌ಎ), ಈ ವರದಿಯನ್ನು ಸಿದ್ಧಪಡಿಸಿವೆ.

ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಕಳೆದ ದಶಕದಲ್ಲಿ ದೇಶದಲ್ಲಿ ತುಂಬಾ ಪ್ರಗತಿಯಾಗಿದೆ ಎಂದು ಈ ಸಂಸ್ಥೆಗಳು ವಿಶ್ಲೇಷಿಸಿವೆ. ಸೌರಶಕ್ತಿ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ವಿಶ್ವದ 10 ದೇಶಗಳ ಪೈಕಿ 5 ದೇಶಗಳು ಏಷ್ಯಾದಲ್ಲಿವೆ. ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ವಿಯೆಟ್ನಾಂ ಮತ್ತು ಭಾರತ ಈ ಸಾಧನೆ ಮಾಡಿವೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.



Join Whatsapp