ಸಿದ್ದರಾಮಯ್ಯನವರ ಹಿಂದೆ ಕುರುಬ ಜನಾಂಗದವರಿಲ್ಲ ಎಂದ ಮುಕುಡಪ್ಪ

Prasthutha|

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟು ವಲ್ಲಿ ಶ್ರಮಿಸಿದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಹಾಗೂ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಸಭಾಪತಿಯಾಗಿ ನೇಮಕಗೊಂಡಿರುವ ರಘನಾಥ ಮಲ್ಕಾಪುರೆ ಅವರನ್ನು ಈ ಸ್ಥಾನದಿಂದ‌ ಮುಂದುವರೆಸಬೇಕೆಂದು ಕುರುಬ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡರಾದ ಮುಕುಡಪ್ಪ, ಟ.ವಿ‌.ಬಳಗಾವಿ, ವಿಧಾನ ಸಭಾ ಚುನಾವಣೆ ಹತ್ತಿರವಾಗಿರುವ ಮಹತ್ವದ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವರನ್ನಾಗಿ ಪುನಃ ನೇಮಕ ಮಾಡಬೇಕು. ರಾಜ್ಯದ ಎರಡನೇ ಪ್ರಬಲ ಸಮುದಾಯವಾದ ಕುರುಬ ಸಮಾಜವನ್ನು ಬಿಜೆಪಿಯೆಡೆಗೆ ಸೆಳೆಯಲು, ಕುರುಬ ಸಮುದಾಯ ಕಾಂಗ್ರೆಸ್ ಪಕ್ಷದ ಕಡೆ ವಾಲುವುದನ್ನು ತಡೆಯಲು ಸಾಧ್ಯವಾಗಲಿದೆ. ನಾವು ಸರ್ಕಾರಕ್ಕೆ ಕೇವಲ ಬೇಡಿಕೆ ಸಲ್ಲಿಸುತ್ತಿದ್ದೇವೆ, ಪ್ರತಿಭಟನೆ, ಹೋರಾಟ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸಭಾಪತಿಯಾಗಿರುವ ರಘನಾಥ ಮಲ್ಕಾಪುರೆ ಅವರನ್ನು ಸಭಾಪತಿಯಾಗಿ ಮುಂದುವರೆಸಬೇಕು. ರಘನಾಥ ಮಲ್ಕಾಪುರೆ ಅವರು ಪಕ್ಷಕ್ಕಾಗಿ ದುಡಿದಿದ್ದು, ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ನೇಮಕ ಮಾಡಬೇಕು ಎಂದು ತಿಳಿಸಿದರು.

- Advertisement -

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಕುರುಬ ಜನಾಂಗ ಇದೆ ಎಂಬುದು ತಪ್ಪು ಕಲ್ಪನೆ. ಈ ಹಿಂದೆ ಕೊಪ್ಪಳಕ್ಕೆ ಸಿದ್ದರಾಮಯ್ಯ ಅವರನ್ನು  ಲಿಂಗಾಯತ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದೀರಿ ಎಂದು ಅಂದು ಅವರನ್ನು ಇದೇ ಕುರುಬರು ಸೋಲಿಸಿದ್ದರು. ಸಿದ್ದರಾಮಯ್ಯ ಅವರು 1983ರಲ್ಲಿ ಸ್ಚತಂತ್ರ ಅಭ್ಯರ್ಥಿಯಾಗಿದ್ದವರು ಯಾಕೆ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಸೋತರು?. ದಾವಣಗೆರೆ ಸಮಾವೇಶದಿಂದ ಸಿದ್ದರಾಮಯ್ಯ ಹಿಂದೆ ಅಖಂಡ ಕುರುಬ ಜನಾಂಗ ಇದೆ ಎಂಬುದು ಭ್ರಮೆ. ಕಾಂಗ್ರೆಸ್ ನವರು ಸಿದ್ದರಾಮಯ್ಯ ಹಿಂದೆ ಕುರುಬ ಜನಾಂಗದವರು ಇದ್ದಾರೆ ಎಂಬ ತಪ್ಪು ತಿಳುವಳಿಕೆ ಹೊಂದಿದ್ದಾರೆ.  ಕುರುಬ ಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿರುವ ಬಾದಾಮಿ ಕ್ಷೇತ್ರದಿಂದ ಯಾಕೆ ಚುನಾವಣೆ ನಿಲ್ಲಲು ಅವರು ಮನಸ್ಸು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

2018ರ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಕುರುಬ ಜನಾಂಗವಿರುವ ರಾಜ್ಯದ 27ಕ್ಷೇತ್ರಗಳಲ್ಲಿ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಮುಕುಡಪ್ಪ ಆರೋಪಿಸಿದರು.



Join Whatsapp