ರಾಜ್ಯ ಸಭೆಯ ಹೌಸಿಂಗ್ ಸಮಿತಿ ಅಧ್ಯಕ್ಷರಾಗಿ ಸಿ.ಎಂ. ರಮೇಶ್ ನೇಮಕ

Prasthutha|

ನವದೆಹಲಿ: ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ರಾಜ್ಯ ಸಭೆಯ ಎಥಿಕ್ಸ್ ಸಮಿತಿಯ ಮತ್ತು ಬಿಜೆಪಿ ಸಂಸದ ಸಿ. ಎಂ. ರಮೇಶ್ ರನ್ನು ರಾಜ್ಯ ಸಭಾ ಹೌಸಿಂಗ್ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

- Advertisement -

ಉಪ ರಾಷ್ಟ್ರಪತಿಗಳೂ ಆಗಿರುವ ರಾಜ್ಯ ಸಭಾ ಚೇರ್ಮನ್ ಜಗದೀಪ್ ದನ್ಕರ್ ಅವರು ನಾನಾ ಸಮಿತಿಗಳನ್ನು ಮರು ರೂಪಿಸಿ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮೇಲ್ಮನೆಯ ಸೆಕ್ರೆಟೇರಿಯೇಟ್ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸಭಾ ಮನವಿ ಸಮಿತಿ ಅಧ್ಯಕ್ಷರಾಗಿ ಬಿಜೆಡಿ ಸಂಸದ ಸುಜಿತ್ ಕುಮಾರ್, ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಡಿಎಂಕೆಯ ಎಂ. ತಂಬಿದೊರೈ, ಸಂಸದೀಯ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ತಾಸಾ ನೇಮಕಗೊಂಡಿದ್ದಾರೆ.

- Advertisement -

ರಾಜ್ಯಸಭೆಯಲ್ಲಿ ಬಿಜೆಪಿಯ ಸಚೇತಕರಾಗಿರುವ ಲಕ್ಷ್ಮೀಕಾಂತ ಬಾಜಪಾಯಿಯವರು ಅಧೀನ ಶಾಸನ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಜಾವಡೇಕರ್ ಅವರು ಮರು ರೂಪಿಸಿದ ನೀತಿ ನಿರೂಪಣಾ (ಎಥಿಕ್ಸ್) ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದರ ಸದಸ್ಯರಾಗಿ ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಓ ಬ್ರಿಯಾನ್, ಕಾಂಗ್ರೆಸ್ಸಿನ ಸಂಸದ ಜೈರಾಂ ರಮೇಶ್, ಬಿಜೆಡಿ ಸಂಸದ ಸಸ್ಮಿತ್ ಪಾತ್ರ, ವೈಎಸ್ ಆರ್ ಕಾಂಗ್ರೆಸ್ಸಿನ ವಿಜಯಸಾಯಿ ರೆಡ್ಡಿ ಇದ್ದಾರೆ.



Join Whatsapp