ಜೈಪುರ: ತಾನು ಪ್ರೀತಿಸಿದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಶಿಕ್ಷಕಿಯೊಬ್ಬಳು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಕೊಂಡು ಮದುವೆಯಾದ ಸಂಗತಿ ರಾಜಸ್ಥಾನದ ಭರತ್ ಪುರದಲ್ಲಿ ಬೆಳಕಿಗೆ ಬಂದಿದೆ.
ದೈಹಿಕ ಶಿಕ್ಷಕಿಯಾದ ಮೀರಾ ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆ ಆದವರು. ಈಗ ನಾನು ಮೀರಾ ಅಲ್ಲ ಆರವ್ ಕುಂತಲಾ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿ ಕಲ್ಪನಾ ಪೌಜುದಾರ್ ಕಬಡ್ಡಿ ಆಟಗಾರ್ತಿ. ತರಬೇತಿಯ ವೇಳೆ ಶಿಕ್ಷಕಿ ಮತ್ತು ಶಿಷ್ಯೆ ಪ್ರೇಮಿಸಿದ್ದರು. ಲಿಂಗ ಪರಿವರ್ತನೆ ಮಾಡಿಕೊಳ್ಳದಿದ್ದರೂ ನಾನು ಅವರನ್ನೇ ಮದುವೆಯಾಗುತ್ತಿದ್ದೆ ಎಂದು ಕಲ್ಪನಾ ಮದುವೆಯ ಬಳಿಕ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
“ಶಾಲೆಯ ಮೈದಾನದಲ್ಲಿ ಕಲ್ಪನಾಳ ಜೊತೆಗೆ ಮಾತನಾಡುತ್ತಿದ್ದೆ. ಅವಳ ಮೇಲೆ ನನಗೆ ಪ್ರೀತಿ ಹುಟ್ಟಿತ್ತು. ನಾನು ಹುಡುಗಿಯಾಗಿ ಹುಟ್ಟಿರಬಹುದು. ಆದರೆ ಬಾಲ್ಯದಿಂದಲೇ ನಾನು ಹುಡುಗ ಆಗಬೇಕು ಎಂದು ಯೋಚಿಸುತ್ತಿದ್ದೆ. ಹಾಗಾಗಿ ನಾನು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದೆ. 2019ರ ಡಿಸೆಂಬರ್ ನಲ್ಲಿ ಮೊದಲ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ ಎಂದು ಆರವ್ ಹೇಳಿದ್ದಾರೆ.