ಮಿಟ್ಸುಬಿಷಿ ಕಾರ್ಖಾನೆ ಸ್ಥಗಿತ: ಬೀದಿಗೆ ಬಿದ್ದ ಕಾರ್ಮಿಕರು

Prasthutha|

ರಾಮನಗರ: ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಡದಿಯಲ್ಲಿರುವ ಕಾರ್ಖಾನೆಯನ್ನು ಏಕಾಏಕಿ ಸ್ಥಗಿತಗೊಳಿಸಿದೆ.

- Advertisement -


ನಷ್ಟದ ಹಿನ್ನೆಲೆ ಬಿಡದಿ ಘಟಕವನ್ನು ಮುಚ್ಚಲಾಗಿದೆ. 54 ನೌಕರರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಉತ್ಪನ್ನಗಳಿಗೆ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಕಂಪನಿಯು ಈ ಕ್ರಮ ಕೈಗೊಂಡಿದ್ದು, ಕಾರ್ಖಾನೆಯಲ್ಲಿನ ತನ್ನ 56 ಕಾರ್ಮಿಕರನ್ನು ನವೆಂಬರ್ 5ರಿಂದಲೇ ಅನ್ವಯ ಆಗುವಂತೆ ಸೇವೆಯಿಂದ ಬಿಡುಗಡೆ ಮಾಡಿದೆ. ಈ ಉದ್ಯೋಗಿಗಳಿಗೆ ಕಾನೂನುಬದ್ಧವಾಗಿ ಪರಿಹಾರ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆಯು ತಿಳಿಸಿದೆ.


ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಮುಚ್ಚುವ ಯೋಜನೆ ತಕ್ಷಣಕ್ಕೆ ಇಲ್ಲ. ಕಂಪನಿಯ ಕಾರ್ಯ ನಿರ್ವಹಣೆಯ ಅಗತ್ಯಗಳಿಗೆ ಕೆಲ ಸಿಬ್ಬಂದಿಯನ್ನು ಉಳಿಸಿಕೊಳ್ಳಲಾಗಿದೆ. ಟ್ರಾನ್ಸ್ ಪೋರ್ಟ್ ಸಿಸ್ಟಂ ವಿಭಾಗದ ಯೋಜನಾ ಕಚೇರಿಯು ತನ್ನ ಕಾರ್ಯ ನಿರ್ವಹಣೆಯನ್ನು ಮುಂದುವರಿಸಲಿದೆ ಎಂದು ಹೇಳಿದೆ.

- Advertisement -


ಕಂಪನಿಯವರು ಇದೀಗ ನಮಗೆ ಏಕಾಏಕಿ ಶಾಕ್ ನೀಡಿದ್ದಾರೆ. ನಾವು ಕಂಪನಿಯನ್ನು ನಂಬಿ ಜೀವನ ನಡೆಸುತ್ತಿದ್ದೆವು. ಇದೀಗ ನಮ್ಮ ಖಾತೆಗೆ ಹಣ ಹಾಕಿ ಕೈತೊಳೆದುಕೊಂಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಕಂಪನಿಯು 2010ರಲ್ಲಿ ಪ್ರಾರಂಭವಾಗಿದ್ದು, ವಿದ್ಯುತ್ ಮತ್ತು ವಿದ್ಯುನ್ಮಾನ ಸಾಧನ ವಲಯದಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ.



Join Whatsapp