ಇಮ್ರಾನ್ ಖಾನ್ ಮೇಲಿನ ದಾಳಿ: 24 ಗಂಟೆಗಳೊಳಗೆ ಎಫ್.ಐ.ಆರ್ ದಾಖಲಿಸಲು ಪಾಕ್ ಸುಪ್ರೀಂ ಕೋರ್ಟ್ ಸೂಚನೆ

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ 24 ಗಂಟೆಗಳೊಳಗೆ ಪ್ರಕರಣ ದಾಖಲಿಸುವಂತೆ ಪ್ರಂಜಾಬ್ ಪ್ರಾಂತ್ಯದ ಇನ್ಸ್’ಪೆಕ್ಟರ್ ಜನರಲ್’ಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.

- Advertisement -

‘ಇದು ನ್ಯಾಯದ ಪರ ಮೊದಲ ಹೆಜ್ಜೆ’ ಎಂದು ಇಮ್ರಾನ್ ಖಾನ್ ಅವರ ಪಕ್ಷ ಪ್ರತಿಕ್ರಿಯಿಸಿದೆ.

ತಾನು ನೀಡಿದ ದೂರಿನಲ್ಲಿ ಸೇನಾ ಜನರಲ್ ಅವರ ಹೆಸರನ್ನು ತೆಗೆದುಹಾಕದ ಹೊರತು ಪ್ರಕರಣವನ್ನು ದಾಖಲಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಆರೋಪಿಸಿದ್ದರು.

- Advertisement -

ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಅವರ ಬಲಗಾಲಿಗೆ ಗುಂಡು ತಗುಲಿದ ಪರಿಣಾಮ ಅವರು ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಅವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಸದ್ಯ ಅವರನ್ನು ಲಾಹೋರ್’ನಲ್ಲಿರುವ ಖಾಸಗಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಇಮ್ರಾನ್ ಖಾನ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ 24 ಗಂಟೆಗಳೊಳಗೆ ಪ್ರಕರಣ ದಾಖಲಿಸುವಂತೆ ಪಂಜಾಬ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಫೈಸಲ್ ಶಹಕರ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚನೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣ ದಾಖಲಿಸದಿದ್ದರೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಾಲ್ ತಿಳಿಸಿರುವುದಾಗಿ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ ಪ್ರಸಕ್ತ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಪಿಟಿಐ ಪಕ್ಷದ ಫವಾದ್ ಚೌಧರಿ, ಇಮ್ರಾನ್ ವಿರುದ್ಧದ ದಾಳಿಯ ಕುರಿತು ಪ್ರಥಮ ಮಾಹಿತಿ ವರದಿಯ ನೋಂದಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು “ನ್ಯಾಯದತ್ತ ಮೊದಲ ಹೆಜ್ಜೆ” ಎಂದು ಬಣ್ಣಿಸಿದ್ದಾರೆ.

ಎಫ್ಐಆರ್ ನಲ್ಲಿ ಸೇನಾ ಅಧಿಕಾರಿಯನ್ನು ಹೆಸರಿಸಬೇಕೆಂಬ ಖಾನ್ರ ಒತ್ತಾಯದಿಂದ ಈ ಬಿಕ್ಕಟ್ಟು ಉಂಟಾಗಿದೆ.



Join Whatsapp