ಮಧ್ಯಪ್ರಾಚ್ಯ ಪ್ರದೇಶವನ್ನು ಇರಾನ್ ಗಿಂತ ಇಸ್ರೇಲ್ ಹೆಚ್ಚು ಅಸ್ಥಿರಗೊಳಿಸುತ್ತದೆ : ರಷ್ಯಾ ರಾಯಭಾರಿ

Prasthutha|

ಮಾಸ್ಕೊ : ಮಧ್ಯಪ್ರಾಚ್ಯ ಪ್ರದೇಶವನ್ನು ಇರಾನ್ ಗಿಂತ ಹೆಚ್ಚು ಇಸ್ರೇಲ್ ಹೆಚ್ಚು ಅಸ್ಥಿರಗೊಳಿಸುತ್ತದೆ ಎಂದು ರಷ್ಯಾ ರಾಯಭಾರಿ ಅನಾಟೊಲಿ ವಿಕ್ಟೊರ್ವೊವ್ ಹೇಳಿದ್ದಾರೆ. ‘ದ ಜೆರುಸಲೇಂ ಪೋಸ್ಟ್’ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

ಪ್ರದೇಶದಲ್ಲಿ ಇರಾನಿಯನ್ ಚಟುವಟಿಕೆಗಳಿಂದ ಸಮಸ್ಯೆಯಿಲ್ಲ. ಇಸ್ರೇಲ್-ಅರಬ್ ಮತ್ತು ಇಸ್ರೇಲ್-ಪೆಲೆಸ್ತಿನಿಯನ್ ಘರ್ಷಣೆಯ ವಿಚಾರದಲ್ಲಿ ವಿಶ್ವಸಂಸ್ಥೆಯ ನಿರ್ಣಯಕ್ಕೆ ಸಂಬಂಧಿಸಿ ದೇಶಗಳ ನಡುವೆ ಅರಿವಿನ ಕೊರತೆಯಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್ ಹಿಝ್ಬೊಲ್ಲಾ ಮೇಲೆ ದಾಳಿ ನಡೆಸುತ್ತಿದೆ, ಹಿಝ್ಬೊಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

Join Whatsapp