ಕೊಲಂಬಿಯ: 15 ಭಾರತೀಯ ಮೂಲದ ಮೀನುಗಾರರನ್ನು ಶ್ರೀಲಂಕಾ ಸರಕಾರದ ನೌಕಾಪಡೆಯು ಬಂಧಿಸಿದೆ.
ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾ ಸರಕಾರ ಬಂಧಿಸಿದೆ.
15 ಮೀನುಗಾರರನ್ನು ಮಾತ್ರವಲ್ಲದೆ ಎರಡು ಟ್ರಾಲರ್ ದೋಣಿಗಳನ್ನೂ ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ.
ಮನ್ನಾರ್ ದ್ವೀಪ ಭಾಗದ ವಾಯವ್ಯ ದಿಕ್ಕಿನ ಜನವಸತಿ ಪ್ರದೇಶ ತಲೈಮನ್ನಾರ್ನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.
ಬಂಧಿತರನ್ನು ಮೀನುಗಾರಿಕಾ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.