ಹಗರಣದಲ್ಲಿ ಸಸ್ಪೆಂಡ್ ಆದವರೆಲ್ಲಾ ಬೋಗಸ್ ತನಿಖೆ ಮಾಡುತ್ತಿದ್ದಾರೆ: ಅಲೋಕ್ ಕುಮಾರ್ ವಿರುದ್ಧ ರೇಣುಕಾಚಾರ್ಯ ಕಿಡಿ

Prasthutha|

ದಾವಣಗೆರೆ: ಸೋದರ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ಹಗರಣದಲ್ಲಿ ಸಸ್ಪೆಂಡ್ ಆದವರೆಲ್ಲಾ ಬೋಗಸ್ ತನಿಖೆ ಮಾಡುತ್ತಿದ್ದಾರೆ ಎಂದು ಅಲೋಕ್ ಕುಮಾರ್ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

- Advertisement -

ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಿಯಾದ ತನಿಖೆ ಮಾಡದೆಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಅಧಿಕಾರಿ ಹಿಂದೆ ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆಗಿದ್ದರು. ಅವರಿಂದ ಯಾವ ರೀತಿ ಉತ್ತಮ ತನಿಖೆ ಆಗುತ್ತದೆ. ಪೊಲೀಸರು ಬೋಗಸ್ ತನಿಖೆ ಮಾಡಿದ್ದಾರೆ. ಚಂದ್ರು ಶವ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ. ಚಂದ್ರ ಕಾರು ಓವರ್ ಸ್ಪೀಡ್ ಎಂದು ಹೇಳುತ್ತಿದ್ದಾರೆ. ಆದರೆ ಇದು ಕೊಲೆ. ಕೆಲವು ಫೋಟೋ ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ ಎಂದರು.


ಪಾರದರ್ಶಕ ತನಿಖೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಚಂದ್ರಶೇಖರ್ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡುತ್ತೇವೆ ಎಂದರು.



Join Whatsapp