ನವದೆಹಲಿ: ಒಬ್ಬ ವ್ಯಕ್ತಿಯು ‘ಜಿಹಾದಿ’ ಲೇಖನ ಅಥವಾ ಅದೇ ರೀತಿಯ ಕಲ್ಪನೆಯನ್ನು ಹೊಂದಿರುವ ಸಾಹಿತ್ಯವನ್ನು ಹೊಂದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪರಾಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಹೇಳಿದೆ.
ಒಂದು ಧಾರ್ಮಿಕ ತತ್ವಶಾಸ್ತ್ರವನ್ನು ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದರೆ ಮಾತ್ರ ಅದನ್ನು ಅಪರಾಧವೆಂದು ಪರಿಗಣಿಸಬಹುದೇ, ಹೊರತು ಕೇವಲ ಜಿಹಾದ್ ಸಾಹಿತ್ಯ ಹೊಂದಿದ್ದಾರೆಂದು ಅಪರಾಧಿಗಳು ಎಂದು ಗ್ರಹಿಸಿಕೊಳ್ಳುವುದು ಅಪರಾಧವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಸೆಷನ್ಸ್ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು 11 ಜನರ ವಿರುದ್ಧದ ಯುಎಪಿಎ ಅಡಿಯಲ್ಲಿನ ಪ್ರಕರಣದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಯಾವುದೇ ನಿರ್ದಿಷ್ಟ ಧಾರ್ಮಿಕ ಪಂಥದ ಕಲ್ಪನೆಯನ್ನು ಒಳಗೊಂಡಿರುವ ಒಂದು ಅನುವಾದ ಅಥವಾ ಸಾಹಿತ್ಯವನ್ನು ಹೊಂದಿರುವುದು ಅಪರಾಧವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಾಹಿತ್ಯ ಕೃತಿಗಳನ್ನು ಕೈವಶವಿರಿಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ನಿರೂಪಿಸಲು ಯಾವುದೇ ಪುರಾವೆಗಳಿಲ್ಲದಿದ್ದರೆ ಅದು ಕೂಡಾ ಅಪರಾಧವಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಜಿಹಾದಿ ಸಾಹಿತ್ಯ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯವು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಮುಶಾಬ್ ಅನ್ವರ್, ರಹೀಸ್ ರಶೀದ್, ಮುಂಡಾಡಿಗುತ್ತು ಸದಾನಂದ ದೀಪ್ತಿ ಮಾರ್ಲಾ, ಮುಹಮ್ಮದ್ ವಕಾರ್ ಲೋನ್, ಮಿಝಾ ಸಿದ್ದೀಕ್, ಶಿಫಾ ಹಾರಿಸ್, ಉಬೈದ್ ಹಾಮಿದ್ ಮಟ್ಟಾ, ಅಮ್ಮಾರ್ ಅಬ್ದುಲ್ ರಹ್ಮಾನ್ ಅವರಿಗೆ ಭಾರತೀಯ ತಂಡ ಸಂಹಿತೆಯ ಸೆಕ್ಷನ್ 120ಬಿ ಹಾಗೂ ಸೆಕ್ಷನ್ 2 (ಒ), 13, 38 ಹಾಗೂ 39ರನ್ವಯ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ಮುಝಾಮಿಲ್ ಹಸನ್ ಭಟ್ ಎಂಬಾತನನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿದೆ.