ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ನಿಧನ

Prasthutha|

ಶಿಮ್ಲಾ: ಸ್ವತಂತ್ರ ಭಾರತದ ಮೊದಲ ಮತದಾರ, 106 ವರ್ಷದ ಶ್ಯಾಮ್ ಸರಣ್ ನೇಗಿ ಅವರು ಹಿಮಾಚಲ ಪ್ರದೇಶದ ಕಲ್ಪಾದ ತಮ್ಮ ಸ್ವಗ್ರಾಮದಲ್ಲಿ ಶನಿವಾರ ಮುಂಜಾನೆ  ನಿಧನರಾಗಿದ್ದಾರೆ.

- Advertisement -

ಹಿಮಾಚಲ ಪ್ರದೇಶದ ಕಿನ್ನೌರ್ ನಿವಾಸಿಯಾಗಿರುವ ಶ್ಯಾಮ್ ಸರಣ್ ನೇಗಿ, ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

1951 ರ ಅಕ್ಟೋಬರ್ 23 ರಂದು ಸ್ವತಂತ್ರ ದೇಶದಲ್ಲಿ ನೇಗಿ ಅವರು ತಮ್ಮ ಮೊದಲ ಮತವನ್ನು ಕಲ್ಪ ಮತಗಟ್ಟೆಯಲ್ಲಿ ಚಲಾಯಿಸಿ,  ದೇಶದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 2 ರಂದು ಅಂಚೆ ಮತ ಚಲಾಯಿಸಿದರು. ಇದು ಅವರ ಕೊನೆಯ ಮತದಾನವಾಗಿದೆ.

- Advertisement -

ನೇಗಿ ಅವರ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದ್ದು, ಗೌರವಯುತವಾಗಿ ವಿದಾಯ ಹೇಳಲು ಬ್ಯಾಂಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಿನ್ನೌರ್ ಅಬಿದ್ ಹುಸೇನ್ ಹೇಳಿದ್ದಾರೆ.

ಸ್ವತಂತ್ರ ಭಾರತದ ಮೊದಲ ಸಂವಿಧಾನಬದ್ಧ ಚುನಾವಣೆ 1951ರ ಅಕ್ಟೋಬರ್ 25ರಂದು ನೇಗಿ ಅವರು ಮೊದಲು ಮತದಾನ ಮಾಡಿದ್ದರು. ನಿರಂತರವಾಗಿ ಮತ ಚಲಾಯಿಸುತ್ತಿದ್ದ ಅವರು ದೇಶದ ಹಿರಿಯ ಮತದಾರ ಆಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಹಿಮಾಚಲ ಪ್ರದೇಶ ಚುನಾವಣೆಗೆ ಮೊದಲ ಅಂಚೆ ಮತದಾನ ರವಾನಿಸಿದ್ದರು. ನವೆಂಬರ್ 5ರ ಶನಿವಾರ ಮುಂಜಾನೆ ನೇಗಿ ಅವರು ತಮ್ಮ ಕಲ್ಪ ಗ್ರಾಮದಲ್ಲಿ ನಿಧನರಾದರು. ಇತ್ತೀಚೆಗೆ ಹಿಮಾಚಲ ಪ್ರದೇಶದ 14 ವಿಧಾನ ಸಭಾ ಚುನಾವಣೆಗೆ ಅವರು ಮತ ರವಾನಿಸಿದ್ದರು. ಅವರು ಮತ ಚಲಾಯಿಸಿದ್ದು ಇದು 34ನೇ ಬಾರಿ.

ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರು ಶತಾಯುಷಿಯ ಮರಣಕ್ಕೆ ಶೋಕ ವ್ಯಕ್ತ ಪಡಿಸಿದ್ದಾರೆ. ನೇಗಿ ಅವರು ಕಿನೌರ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಕಿನೌರ್ ಜಿಲ್ಲಾಧಿಕಾರಿಯವರು ಪೂರ್ಣ ರಾಜ್ಯ ಗೌರವದೊಂದಿಗೆ ಅಂತ್ಯ ಕ್ರಿಯೆ ನೆರವೇರಿಸುವುದಾಗಿ ಹೇಳಿದರು.

ಶೋಕ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಠಾಕೂರ್, ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲೂ ಮತ ಚಲಾಯಿಸಿ, ಮೊನ್ನೆಯೂ ಮತ ಹಾಕಿದ ಶತಾಯುಷಿಯ ಸಾವು ನೋವು ತಂದಿದೆ, ಅವರು ಶಾಂತಿ ಪಡೆಯಲಿ ಎಂದು ಹೇಳಿದ್ದಾರೆ.

ಮತದಾನಕ್ಕೆ ಸ್ಪೂರ್ತಿಯಾಗಲಿ ಎಂದು ಭಾರತೀಯ ಚುನಾವಣಾ ಆಯೋಗವು ನೇಗಿಯವರ ಫೋಟೋ ವೀಡಿಯೋವನ್ನು ಹಂಚಿಕೊಂಡಿತ್ತು. ‘ದೇಶವನ್ನು ಬಲಪಡಿಸಲು ಯುವ ಮತದಾರರು ನೇಗಿಯವರ ದಾರಿಯಲ್ಲಿ ಮತದಾನ ಮಾಡುವ ಸ್ಫೂರ್ತಿ ಪಡೆಯಬೇಕು’ ಎಂದೂ ಚುನಾವಣಾ ಆಯೋಗ ಪೋಸ್ಟ್ ಮಾಡಿತ್ತು. 



Join Whatsapp