ಟಿ20 ವಿಶ್ವಕಪ್‌ | ಸೂಪರ್‌ 12ರ ಅಂತಿಮ ಪಂದ್ಯದಲ್ಲಿ 35 ರನ್‌ಗಳ ಅಂತರದಲ್ಲಿ ಗೆದ್ದ ನ್ಯೂಜಿಲೆಂಡ್

Prasthutha|

ಟಿ20 ವಿಶ್ವಕಪ್‌ನ ಸೂಪರ್‌ 12ರ ತನ್ನ ಅಂತಿಮ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌, ಐರ್ಲೆಂಡ್‌ ವಿರುದ್ಧ 35 ರನ್‌ಗಳ ಜಯ ಸಾಧಿಸಿದೆ. ಅಡಿಲೇಡ್‌ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್‌ ಬಳಗ ನೀಡಿದ್ದ 186 ರನ್‌ಗಳನ್ನು ಬೆನ್ನಟ್ಟುವಲ್ಲಿ ವಿಫಲವಾದ ಐರ್ಲೆಂಡ್‌,  9 ವಿಕೆಟ್‌ ನಷ್ಟದಲ್ಲಿ 150 ರನ್‌ಗಳಿಸಲಷ್ಟೇ ಶಕ್ತವಾಯಿತು.

- Advertisement -

ಈ ಗೆಲುವಿನೊಂದಿಗೆ ಸೆಮಿಫೈನಲ್‌ ಸ್ಥಾನದ ಮೇಲೆ ನ್ಯೂಜಿಲೆಂಡ್‌ ಮೊದಲ ಹೆಜ್ಜೆಯನ್ನಿಟ್ಟಿದೆ. ಸೂಪರ್‌ 12 ಹಂತದಲ್ಲಿ ಎಲ್ಲಾ 5 ಪಂದ್ಯಗಳನ್ನು ಮುಗಿಸಿರುವ ನ್ಯೂಜಿಲೆಂಡ್‌, 7 ಅಂಕಗಳನ್ನು ಹೊಂದಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ತಲಾ 5 ಅಂಕಗಳನ್ನು ಹೊಂದಿದ್ದು, ಇನ್ನೂ 1 ಪಂದ್ಯಗಳನ್ನು ಆಡಬೇಕಿದೆ.  

ಆಸ್ಟ್ರೇಲಿಯಾ ಅಫ್ಘಾನಿಸ್ತಾನ ವಿರುದ್ಧ ಮತ್ತು ಇಂಗ್ಲೆಂಡ್‌, ಶ್ರೀಲಂಕಾ ವಿರುದ್ಧ ಜಯ ಸಾಧಿಸಿದರೆ ಮೂರೂ ತಂಡಗಳು 7 ಅಂಕಗಳೊಂದಿಗೆ ಸೂಪರ್‌ 12 ಹಂತವನ್ನು ಮುಗಿಸಲಿದೆ. ಈ ವೇಳೆ ರನ್‌ ರೇಟ್‌ ಆಧಾರದಲ್ಲಿ ಮೊದಲ 2 ತಂಡಗಳು ಸೆಮಿ ಪ್ರವೇಶಿಸಲಿದೆ.

- Advertisement -

ಓವಲ್‌ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಐರ್ಲೆಂಡ್‌, ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಮಹತ್ವದ ಪಂದ್ಯದಲ್ಲಿ ಜವಾಬ್ಧಾರಿಯುತ ಇನ್ನಿಂಗ್ಸ್‌ ಆಡಿದ ನಾಯಕ ಕೇನ್‌ ವಿಲಿಯಮ್ಸನ್‌, 61 ರನ್‌ (35 ಎಸೆತ, 4×5, 6×3) ಗಳಿಸಿದರು. ಫಿನ್‌ ಆಲೆನ್‌ (32 ರನ್‌) ಡೆವೊನ್‌ ಕಾನ್ವೆ (28 ರನ್‌) ಹಾಗೂ ಡೇರಿಲ್ ಮಿಚೆಲ್ ಅಜೇಯ 31 ರನ್‌ ಗಳಿಸಿದರು.

19ನೇ ಓವರ್‌ನಲ್ಲಿ ʻಲಿಟ್ಲ್‌ ಹ್ಯಾಟ್ರಿಕ್‌ʼ

200 ಪ್ಲಸ್‌ ಮೊತ್ತ ದಾಟುವ ಸೂಚನೆ ನೀಡಿದ್ದ ಕಿವೀಸ್‌ ಬ್ಯಾಟ್ಸ್‌ಮ,ನ್‌ಗಳಿಗೆ ಜಾಶ್‌ ಲಿಟ್ಲ್‌ ಕಡಿವಾಡ ಹಾಕಿದರು. 18 ಓವರ್‌ಗಳ ಅಂತ್ಯಕ್ಕೆ ನ್ಯೂಝಿಲ್ಯಾಂಡ್‌, 3 ವಿಕೆಟ್‌ ನಷ್ಟದಲ್ಲಿ 173 ರನ್‌ ಗಳಿಸಿತ್ತು. ಆದರೆ 19ನೇ ಓವರ್‌ನಲ್ಲಿ ಜಾಶ್‌ ಲಿಟ್ಲ್‌, ಹ್ಯಾಟ್ರಿಕ್‌ ವಿಕೆಟ್‌ ಪಡೆಯುವಲ್ಲಿ ಸಫಲರಾದರು. ವಿಲಿಯಮ್ಸನ್‌, ಜೇಮ್ಸ್‌ ನೀಶಮ್‌ ಹಾಗೂಮಿಚೆಲ್‌ ಸ್ಯಾಂಟ್ನರ್‌ ವಿಕೆಟ್‌ ಲಿಟ್ಲ್‌ ಪಾಲಾಯಿತು.  

ಚೇಸಿಂಗ್‌ ವೇಳೆ ಐರ್ಲೆಂಡ್‌ ತಂಡ ಉತ್ತಮ ಆರMಭ ಪಡೆದಿದ್ದು. ಆರಂಭಿಕರಾದ ಪೌಲ್‌ ಸ್ಟರ್ಲಿಂಗ್‌ (37 ರನ್‌) ಮತ್ತು ನಾಯಕ ಆಂಡಿ ಬಲ್‌ಬಿರ್ನಿ 30 ರನ್‌ಗಳಿಸಿದ್ದರು. ಜಾರ್ಜ್‌ ಡೊಕ್ರೈಲ್‌ 15 ಎಸೆತಗಳಲ್ಲಿ 23 ರನ್‌ಗಳಿಸಿದರು. ಆದರೆ ಆಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ ಪರಿಣಾಮ ಐರ್ಲೆಂಡ್‌ ಸುಲಭವಾಗಿ ಶರಣಾಯಿತು.



Join Whatsapp