ಸಮನ್ಸ್ ಕಳುಹಿಸುವ ಬದಲು ನಾನು ಅಪರಾಧ ಮಾಡಿದ್ದರೆ ನನ್ನನ್ನು ಬಂಧಿಸಿ: ಜಾರಿ ನಿರ್ದೇಶನಾಲಯಕ್ಕೆ ಜಾರ್ಖಂಡ್ ಸಿಎಂ ಸವಾಲು

Prasthutha|

ರಾಂಚಿ: ವಿಚಾರಣೆಗೆ ಸಮನ್ಸ್ ಕಳುಹಿಸುವ ಬದಲು ಅಪರಾಧ ಮಾಡಿದ್ದರೆ ತನ್ನನ್ನು ಬಂಧಿಸುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್  ಜಾರಿ ನಿರ್ದೇಶನಾಲಯಕ್ಕೆ ಸವಾಲು ಹಾಕಿದ್ದಾರೆ.

- Advertisement -

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಂದು ರಾಂಚಿ ಮೂಲದ ಕಚೇರಿ ಮುಂದೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಛತ್ತೀಸ್ ಗಢ ಸರ್ಕಾರ ಆಯೋಜಿಸಿರುವ ಬುಡಕಟ್ಟು ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ವಿಚಾರಣೆಗೆ ತಪ್ಪಿಸಿಕೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸೊರೇನ್,  ನಾನು ಈಗಾಗಲೇ ಛತ್ತೀಸ್ ಗಢದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ ಇಂದು ಇ.ಡಿ. ನನ್ನನ್ನು ಕರೆದಿದೆ. ನಾನು ಅಷ್ಟು ದೊಡ್ಡ ಅಪರಾಧವನ್ನು ಮಾಡಿದ್ದರೆ ಬಂದು ನನ್ನನ್ನು ಬಂಧಿಸಲಿ. ಇಡಿ ಕಚೇರಿ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಯಾಕೆ? ನೀವು ಜಾರ್ಖಂಡ್ನರಿಗೆ ಹೆದರುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.



Join Whatsapp