ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕುಳ್ಳ ರಾಜ, ಕುಳ್ಳಿ ರಾಣಿ’

Prasthutha|

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕುಳ್ಳ ಜೋಡಿಯು ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

- Advertisement -


2.3 ಅಡಿ ಎತ್ತರವಿರುವ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಝೀಮ್ ಮನ್ಸೂರಿ ಮತ್ತು 3 ಅಡಿ ಎತ್ತರವಿರುವ ಬುಶ್ರಾ ಜೋಡಿಯು ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಈ ಹಿಂದೆ 27 ವರ್ಷದ ಅಝೀಮ್ ಮನ್ಸೂರಿ ತನಗೊಂದು ವಧು ಹುಡುಕಲು ಸಹಾಯ ಮಾಡುವಂತೆ ಸರ್ಕಾರಿ ಅಧಿಕಾರಿಗಳ ಮೊರೆ ಹೋಗಿದ್ದರು. ಆದರೆ, ಕುಳ್ಳಗಿರುವ ಕಾರಣಕ್ಕೆ ಮನ್ಸೂರಿಗೆ ಸರಿಸಾಟಿಯಾದ ಹುಡುಗಿಯನ್ನು ಹುಡುಕುವುದು ಬಲು ಕಷ್ಟದ ಕೆಲಸವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಮನ್ಸೂರಿ ಅಂದಿನ ಯುಪಿ ಸಿಎಂ ಅಖಿಲೇಶ್ ಯಾದವ್ ರೊಂದಿಗೂ ತನಗೆ ಮದುವೆ ಮಾಡಿಸುವಂತೆ ಮನವಿ ಮಾಡಿದ್ದ.


ಕೊನೆಗೂ ಮನ್ಸೂರಿಗೆ ಹಾಪುರದ ವಧು ಬುಶ್ರಾ ಜೊತೆ ವಿವಾಹ ನಡೆದಿದೆ. ಮನ್ಸೂರಿ 5ನೇ ತರಗತಿಯವರೆಗೆ ಓದಿದ್ದಾನೆ. ಬುಶ್ರಾ ಬಿ.ಕಾಂ. ಪದವಿ ಶಿಕ್ಷಣವನ್ನು ಪಡೆದಿದ್ದಾಳೆ. ಮನ್ಸೂರಿ, ಕಾಸ್ಮೆಟಿಕ್ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾನೆ. ಇತ್ತ ನವ ವಧು ಬುಶ್ರಾ ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನೂ ಹೊತ್ತಿದ್ದಾಳೆ.

- Advertisement -




Join Whatsapp