ಸತ್ಯೇಂದ್ರ ಜೈನ್ ಗೆ 10 ಕೋಟಿ ರೂ. ಪ್ರೊಟೆಕ್ಷನ್ ಮನಿ ಪಾವತಿಸುವಂತೆ ಒತ್ತಾಯಿಸಲಾಯಿತು: ಸುಕೇಶ್ ಚಂದ್ರಶೇಖರ್

Prasthutha|

ನವದೆಹಲಿ: ಸತ್ಯೇಂದ್ರ ಜೈನ್ ಅವರಿಗೆ 10 ಕೋಟಿ ರೂ.ಗಳನ್ನು ಪ್ರೊಟೆಕ್ಷನ್ ಮನಿ ರೂಪದಲ್ಲಿ ಪಾವತಿಸುವಂತೆ ನನಗೆ ಒತ್ತಾಯಿಸಲಾಯಿತು ಎಂದು ಆರೋಪಿಸಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾರೆ.

- Advertisement -

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಪಕ್ಷದ ಪ್ರಮುಖ ಹುದ್ದೆಗಾಗಿ ಎಎಪಿ ಗೆ 50 ಕೋಟಿ ರೂ., ಜೈಲಿನಲ್ಲಿರುವ ಸಚಿವ ಸತ್ಯೇಂದರ್ ಜೈನ್ ಅವರಿಗೆ 10 ಕೋಟಿ ರೂ. ಹಾಗೂ  ಜೈಲು ಮಹಾನಿರ್ದೇಶಕ ಸಂದೀಪ್ ಗೋಯಲ್ ಅವರಿಗೆ 12.5 ಕೋಟಿ ರೂ. ಪ್ರೊಟೆಕ್ಷನ್ ಮನಿ ನೀಡಿರುವುದಾಗಿ ಪತ್ರದಲ್ಲಿ ಆರೋಪಿಸಿದ್ದಾರೆ.

ಸಚಿವ ಸತ್ಯೇಂದರ್ ಜೈನ್ ಮತ್ತು ದೆಹಲಿ ಕಾರಾಗೃಹದ ಮಹಾನಿರ್ದೇಶಕ ಸಂದೀಪ್ ಗೋಯಲ್ ಅವರಿಂದ ತಮಗೆ ಬೆದರಿಕೆಗಳು ಬರುತ್ತಿವೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದೂ ಚಂದ್ರಶೇಖರ್ ಆರೋಪಿಸಿದ್ದಾರೆ.

- Advertisement -

ಅಕ್ಟೋಬರ್ 7 ರಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ ಸುಕೇಶ್ ಈ ಆರೋಪಗಳನ್ನು ಮಾಡಿದ್ದು, ಮೊರ್ಬಿ ದುರಂತದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎಎಪಿಯ ವರ್ಚಸ್ಸಿಗೆ ಮಸಿ ಬಳಿಯುವ ತಂತ್ರ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ  ಆರೋಪಗಳನ್ನು ತಳ್ಳಿಹಾಕಿದ್ದಾರೆ.



Join Whatsapp