ಬಂಡೇಮಠದ ಸ್ವಾಮಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಮಠದ ಸ್ವಾಮಿ, ಯುವತಿ ಸೇರಿ ಮೂವರು ಸೆರೆ

Prasthutha|

ಬೆಂಗಳೂರು: ಮಾಗಡಿ ತಾಲೂಕಿನ ಬಂಡೇಮಠದ ಬಸವಲಿಂಗ ಸ್ವಾಮಿಯ ಆತ್ಮಹತ್ಯೆ ಪ್ರಕರಣದ ಸಂಬಂಧ ಮಾಗಡಿ ತಾಲೂಕು ಕಣ್ಣೂರು ಮಠದ  ಮೃತ್ಯಂಜಯ ಶ್ರೀ, ಸ್ಥಳೀಯ ಮುಖಂಡ ಮಹಾದೇವಯ್ಯ ಹಾಗೂ ಓರ್ವ ಯುವತಿ ಸೇರಿ ಮೂವರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಮೂರು ಪುಟಗಳಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು. ಈ ವೇಳೆ 21ವರ್ಷದ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು.

ಅಲ್ಲದೇ ಕಣ್ಣೂರು ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಅವರು ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟುಮಾಡುತ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಯುವತಿಯೇ ಕಾರಣ ಎಂದು ಸಾವಿಗೂ ಮೊದಲು ಬಂಡೆ ಮಠದ ಶ್ರೀಗಳು ಡೆತ್ ನೋಟ್ ಬರೆದಿಟ್ಟಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ ರಾಮನಗರ ಪೊಲೀಸರು ಬೆಂಗಳೂರು ಮೂಲದ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಣ್ಣೂರು ಶ್ರೀ ಹಾಗೂ ಬಂಡೆ ಮಠದ ಶ್ರೀಗಳು ಸಂಬಂಧಿಗಳಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಕಣ್ಣೂರು ಶ್ರೀ ಪೀಠಕ್ಕಾಗಿ ಷಡ್ಯಂತ್ರ ನಡೆಸಿದ್ದ ವಿಷಯವು ಬೆಳಕಿಗೆ ಬಂದಿದ್ದು, ಕಣ್ಣೂರು ಶ್ರೀಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಸ್ವಾಮೀಜಿ ಜೊತೆ ಏಳೆಂಟು ಮಂದಿ ಸಹ ಕೈಜೋಡಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.

ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣ ಭೇದಿಸಲು ರಾಮನಗರ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ. ನಾಲ್ವರು ಸಿಪಿಐ ಹಾಗೂ ಐದು ಜನ ಪಿಎಸ್‍ಐ  ಮತ್ತು ಒಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಹನಿಟ್ರ್ಯಾಪ್​ ನಡೆಸಿರುವ ಮಾಹಿತಿ ಲಭ್ಯವಾಗಿದ್ದು  ಎಲ್ಲಾ ಅಯಾಮಗಳಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ ‌ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ತಿಳಿಸಿದರು.

ಈ‌ ನಡುವೆ ಮೊದಲೆರಡು ವೀಡಿಯೋದಲ್ಲಿ ಅರೆ ನಗ್ನವಾಗಿದ್ದ ಬಂಡೆಶ್ರೀ, ಮೂರನೇ ವೀಡಿಯೋದಲ್ಲಿ ‌ಸಂಪೂರ್ಣ ನಗ್ನವಾಗಿರುವುದು ವೈರಲ್ ಆಗಿದೆ. ಆದರೆ ವೀಡಿಯೋ ಕಾಲ್ ಮಾಡಿರುವ ಮಹಿಳೆ ಯಾರೆಂದು ಈವರೆಗೆ ಗೊತ್ತಾಗಿಲ್ಲ. ಬದಲಿಗೆ ಆಕೆ ಸಂಪೂರ್ಣ ವೀಡಿಯೋ ಕಾಲ್‍ನ್ನು ರೆಕಾರ್ಡ್ ಮಾಡಿಕೊಂಡು ಆಡಿಯೋವನ್ನು ಮ್ಯೂಟ್ ಮಾಡಿದ್ದಾಳೆ.

ಈಗಾಗಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ದೊರೆತಿದ್ದ ಸ್ಥಳದಲ್ಲಿ ಡೆತ್‍ನೋಟ್‍ನಲ್ಲಿದ್ದ 8 ಮಂದಿಯನ್ನು ರಾಮನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಂಡೆ ಮಠ ಶ್ರೀಗಳು ತನ್ನನ್ನು ಹನಿ ಟ್ರ್ಯಾಪ್‌ ಮಾಡಲಾಗಿದೆ ಎಂದು ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಬೆಂಗಳೂರು ಮೂಲದ ಒಬ್ಬ ಮಹಿಳೆಯ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಂತೆ ಮೂರನೇ ವಿಡಿಯೋ ಕೂಡ ನಿನ್ನೆ ಸೋರಿಕೆಯಾಗಿದೆ. ವಿಡಿಯೋದಲ್ಲಿ ಕೆಲವು ದೃಶ್ಯದ ವಿಡಿಯೋ ತೋರಿಸಿ ಅದರಂತೆ ಮುದ್ದಾಡೋಣ ಎಂದು ಮಹಿಳೆಗೆ ಹೇಳುವ ದೃಶ್ಯಗಳು ಎರಡನೇ ವಿಡಿಯೋದಲ್ಲಿತ್ತು. ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ ಬಸವಲಿಂಗ ಸ್ವಾಮೀಜಿ, ವಿಡಿಯೋಗಳನ್ನು ಒಂದು ಮೊಬೈಲ್‌ನಲ್ಲಿ ತೋರಿಸಿ ಮತ್ತೊಂದು ಮೊಬೈಲ್‌ನಲ್ಲಿ ವಿಡಿಯೊ ಕಾಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.



Join Whatsapp