ಇನ್ನು ಮುಂದೆ ಟ್ಟಿಟರ್,ಭಿನ್ನ ಧ್ವನಿಗಳನ್ನು ಹತ್ತಿಕ್ಕದೆ, ದ್ವೇಷ ಭಾಷಣದ ವಿರುದ್ಧ ಕಾರ್ಯಾಚರಿಸುತ್ತದೆ ಎಂದು ಭಾವಿಸುತ್ತೇನೆ: ರಾಹುಲ್ ಗಾಂಧಿ

Prasthutha|

ನವದೆಹಲಿ: ಇನ್ನು ಮುಂದೆ ಟ್ವಿಟರ್, ವಿರೋಧದ ಭಿನ್ನ ಧ್ವನಿಗಳನ್ನು ಹತ್ತಿಕ್ಕುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

ಎಲಾನ್‌ ಮಸ್ಕ್‌ ಅವರಿಗೆ ಅಭಿನಂದನೆಗಳು. ಟ್ಟಿಟರ್ ಇನ್ನು ಮುಂದೆ ದ್ವೇಷ ಭಾಷಣದ ವಿರುದ್ಧ ಕಾರ್ಯನಿರ್ವಹಿಸಲಿದೆ, ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ ಮತ್ತು ಭಾರತದಲ್ಲಿ ವಿರೋಧದ ಧ್ವನಿಯನ್ನು ಹತ್ತಿಕ್ಕುವುದಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ವಿಶ್ವದ ಪ್ರಮುಖ ಶ್ರೀಮಂತಗಾರರ ಪಟ್ಟಿಯಲ್ಲಿದ್ದ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ಸಂಸ್ಥೆಯನ್ನು ಖರೀದಿ ಮಾಡಿ, ಆ ಬಳಿಕ ಹಲವು ಬದಲಾವಣೆಗಳನ್ನು ತಂದಿದ್ದರು.

- Advertisement -

ಟ್ಟಿಟರ್ ತನ್ನ ತೆಕ್ಕೆಗೆ ಬಂದ ಕೆಲವೇ ಕ್ಷಣಗಳಲ್ಲಿ ಟ್ಟಿಟರ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಾರತೀಯ ಮೂಲದ ಕೆಲವರನ್ನು ಮಸ್ಕ್ ವಜಾಗೊಳಿಸಿದ್ದರು. ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ಬಲು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ಎಲನ್ ಮಸ್ಕ್ ‘ ಹಕ್ಕಿ ಸ್ವತಂತ್ರವಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು.

ಈ ಎಲ್ಲಾ ಬೆಳವಣಿಗೆಯ ಬಳಿಕ ಕಾಂಗ್ರೆಸ್ ವಕ್ತಾರ ರಾಹುಲ್ ಗಾಂಧಿ ಟ್ವಿಟರ್ ಕುರಿತು ಈ ಬಗೆಯಲ್ಲಿ ಹೊಸ ಆಶ್ವಾಸನೆಯ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ.

Join Whatsapp