ಮುಸ್ಲಿಮ್ ಬಾಹುಳ್ಯದಲ್ಲಿ 25 ಮನೆ ಧ್ವಂಸ: ದೆಹಲಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ

Prasthutha|

ನವದೆಹಲಿ: ಮುಸ್ಲಿಮ್ ಬಾಹುಳ್ಯದ ನೈಋತ್ಯ ದೆಹಲಿಯ ಖರಕ್ ರಿವಾರಾ ಸತ್ಬರಿ ಪ್ರದೇಶದಲ್ಲಿ ಯಾವುದೇ ಮುನ್ಸೂಚನೆ ನೀಡದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಪೊಲೀಸ್ ಪಡೆಗಳೊಂದಿಗೆ ಸೇರಿಕೊಂಡು ಸುಮಾರು 25 ಮನೆಗಳನ್ನು ಧ್ವಂಸಗೊಳಿಸಿದೆ ಎಂದು ಸತ್ಯಶೋಧನಾ ತಂಡ ತಿಳಿಸಿದೆ.

- Advertisement -

ಮುಸ್ಲಿಮರು ನಮಾಝ್ ಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಘಟನೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಛತ್ತರ್ ಪುರದ ಬೇರಿ ಪ್ರದೇಶಕ್ಕೆ ಭೇಟಿ ನೀಡಿದೆ ಮತ್ತು ಡಿಡಿಎ ಪ್ರಾಧಿಕಾರವು ಇಲ್ಲಿನ ನಿವಾಸಿಗಳ ವಿರುದ್ಧ ಕ್ರೂರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿದೆ.

- Advertisement -

ಈ ಮಧ್ಯೆ ಪ್ರಾಧಿಕಾರದ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಲಾಗಿದ್ದು, ಮಹಿಳೆಯರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಪೊಲೀಸರು ಪ್ರತಿಭಟನನಿರತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಧ್ವಂಸಗೊಂಡ ಮನೆಗಳ ಅವಶೇಷಗಳಿಂದ ತಮ್ಮ ಗೃಹೋಪಯೋಗಿ ವಸ್ತುಗಳನ್ನು ಪಡೆಯಲು ಕಾಲವಕಾಶವನ್ನೂ ನೀಡಿಲ್ಲ. ಡಿಡಿಎ ಅಧಿಕಾರಿಗಳು ದೀಪಾವಳಿ ಬಳಿಕ ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ಹೆಚ್ಚಿನ ಮನೆಗಳನ್ನು ಧ್ವಂಸ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.



Join Whatsapp