ಕಾಣಿಯೂರು ಹಲ್ಲೆ ಸಂತ್ರಸ್ತರರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪುತ್ತೂರಿನಲ್ಲಿ ಪ್ರತಿಭಟನೆ, ಮುಸ್ಲಿಮ್ ಒಕ್ಕೂಟ ಬೆಂಬಲ: ಕೆ. ಅಶ್ರಫ್

Prasthutha|

ಮಂಗಳೂರು: ಇತ್ತೀಚೆಗೆ ಕಾಣಿಯೂರುನಲ್ಲಿ ಇಬ್ಬರು ವರ್ತಕರಿಗೆ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ವಿನಾ ಕಾರಣ ಮಾರಣಾಂತಿಕ ಹಲ್ಲೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದೆ ಎಂದು ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಕಾಣಿಯೂರುನಲ್ಲಿ ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮ ಅಪೇಕ್ಷಿಸಿ ಮತ್ತು ದ.ಕ. ಜಿಲ್ಲೆಯಲ್ಲಿ ಭಯ ಮುಕ್ತ ವ್ಯಾಪಾರ ಸ್ವಾತಂತ್ರ್ಯ ನಿರ್ಮಾಣ ಬೇಡಿಕೆಯನ್ನು ಮುಂದಿಟ್ಟು, ದ.ಕ. ಜಿಲ್ಲಾಡಳಿತ, ಪೊಲೀಸು ಇಲಾಖೆ ಮತ್ತು ಸರಕಾರದ ಸಮಕ್ಷಮ ನಾಳೆ ಶುಕ್ರವಾರ ಅಪರಾಹ್ನ 3.00 ಘಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ನಡೆಯುವ ಶಾಂತಿಯುತ, ಪ್ರಜಾ ಸತ್ತಾತ್ಮಕ ಜಾಥಾ ಮತ್ತು ಪ್ರತಿಭಟನಾ ಸಭೆಯನ್ನು ದ.ಕ. ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಪುತ್ತೂರು ವತಿಯಿಂದ ಮತ್ತು ಸ್ಥಳೀಯ ಸಂಘಟನೆಗಳು, ಜಮಾಅತ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದೆ ಎಂದು ಕೆ.ಅಶ್ರಫ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp