ಫ್ಲೈಓವರ್ ನಿಂದ ಬೈಕ್ ಕೆಳಗೆ ಬಿದ್ದು ಸವಾರ ಮೃತ್ಯು

Prasthutha|

ಬೆಂಗಳೂರು: ಫ್ಲೈಓವರ್ ಮೇಲಿಂದ ಬೈಕ್ ಕೆಳಗೆ ಬಿದ್ದು ಅದರ ಸವಾರ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಕ್ರಾಸ್ ಬಳಿ ಸೋಮವಾರ ನಡೆದಿದೆ.

- Advertisement -

ಆಂಧ್ರಪ್ರದೇಶ ಮೂಲದ ಕೌರಿ ನಾಗಾರ್ಜುನ (33) ಮೃತಪಟ್ಟವರು. ಬೆಂಗಳೂರಿನಿಂದ ಹೊಸೂರು ಕಡೆ ನಾಗಾರ್ಜುನ ಅವರು ಪಲ್ಸರ್ ಬೈಕ್ ನಲ್ಲಿ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಕ್ರಾಸ್ ಬಳಿ ಬರುತ್ತಿದ್ದಂತೆ ಫ್ಲೈಓವರ್ ಇಳಿಯಬೇಕಾಗಿತ್ತು. ಈ ವೇಳೆ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಫ್ಲೈಓವರ್ ನ ತಡೆಗೊಡೆಗೆ ಗುದ್ದಿ ಮೇಲಿಂದ ಕೆಳಕ್ಕೆ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಸಾರ್ವಜನಿಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಾಗಾರ್ಜುನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.



Join Whatsapp