ಚಿರತೆ ದಾಳಿ: ಒಂದೂವರೆ ವರ್ಷದ ಮಗು ಮೃತ್ಯು

Prasthutha|

ಮುಂಬೈ: ಚಿರತೆಯೊಂದು ದಾಳಿ ನಡೆಸಿ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ಹಾಕಿರುವ ದಾರುಣ ಘಟನೆ ಗೋರೆಗಾಂವ್ ನ ಪಶ್ಚಿಮ ಉಪನಗರದಲ್ಲಿ ನಡೆದಿದೆ.

- Advertisement -

ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ ಆರೇಯ್ ಘಟಕ ಸಂಖ್ಯೆ 15 ರಲ್ಲಿ ಈ ಘಟನೆ ನಡೆದಿದ್ದು, ಮಗುವು ತಮ್ಮ ಮನೆಯಿಂದ ಸುಮಾರು 30 ಅಡಿ ದೂರದಲ್ಲಿರುವ ದೇವಾಲಯಕ್ಕೆ ತಾಯಿಯೊಂದಿಗೆ ಹೋಗುತ್ತಿದ್ದಾಗ ಅಡಗಿ ಕುಳಿತಿದ್ದ ಚಿರತೆ ಏಕಾಏಕಿ ದಾಳಿ ನಡೆಸಿದೆ ಎಂದು ಆರೇಯ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರದಲ್ಲಿ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಈ ಪ್ರದೇಶದಲ್ಲಿ ಮಾನವ-ವನ್ಯಜೀವಿಗಳ ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಾರ್ಯಯೋಜನೆಯೊಂದನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.



Join Whatsapp