ಇಂಗ್ಲೆಂಡ್: ಬ್ರಿಟನ್ ರಾಜಕೀಯ ಬಿಕ್ಕಟ್ಟಿನಿಂದಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಲಿಝ್ ಟ್ರಸ್ ನಡೆಯ ಬೆನ್ನಲ್ಲೇ, ನೂತನ ಪ್ರಧಾನಿ ಹುದ್ದೆಯ ಚುನಾವಣಾ ಕಣದಿಂದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಭಾರತೀಯ ಮೂಲದ ರಿಷಿ ಸುನಕ್ ಅವರು ಚೊಚ್ಚಲ ಅವಧಿಗೆ ಪ್ರಧಾನಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಮಾಜಿ ಪ್ರಧಾನಿ ಬೋರಿಸ್, ತನ್ನ ಪುನರಾಗಮನಕ್ಕೆ ಇದು ಸಕಾಲವಲ್ಲ ಎಂದು ತಿಳಿಸುತ್ತಾ, ಚುನಾವಣಾ ಕಣದಿಂದ ಹಿಂದೆ ಸರಿದರು. ಈ ಬೆಳವಣಿಗೆಯು ಸುನಕ್ ಅವರಿಗೆ ದೀಪಾವಳಿಯ ಕೊಡುಗೆಯಂತಾಗಿದ್ದು, ಅವರ ವಿಜಯದ ನಿರೀಕ್ಷೆಯನ್ನು ಕಡೆಗಣಿಸುವಂತಿಲ್ಲ ಎಂದು ಹೇಳಲಾಗಿದೆ.