ಟಿ20 ವಿಶ್ವಕಪ್ನ ಸೂಪರ್ ಸಂಡೆ ಕದನದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ, ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ, ದಾಖಲೆಯ 8ನೇ ಟಿ20 ವಿಶ್ವಕಪ್ ಆಡುತ್ತಿದ್ದಾರೆ.
ಮೆಲ್ಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಬೌಲರ್ಗಳಿಗೆ ನೆರವು ನೀಡುವ ಪಿಚ್ ಇದಾಗಿದೆ. ಆದರೂ ಸಾಮಾನ್ಯವಾಗಿ ಟಿ20 ಕ್ರಿಕೆಟ್ನಲ್ಲಿ 160-170 ಮೊತ್ತ ದಾಖಲಾಗುತ್ತದೆ.
2016ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 184 ರನ್ ಗಳಿಸಿರುವುದು ಎಂಸಿಜಿಯಲ್ಲಿ ಭಾರತ ತಂಡದ ಇದುವರೆಗಿನ ಟಾಪ್ ಸ್ಕೋರ್ ಆಗಿದೆ.
ಈ ಮೈದಾನದಲ್ಲಿ ಭಾರತವು ಒಟ್ಟು 4 ಟಿ20 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು ಮತ್ತು 1ಪಂದ್ಯದಲ್ಲಿ ಸೋತಿದೆ. 1 ಪಂದ್ಯವು ಡ್ರಾದಲ್ಲಿ ಅಂತ್ಯಕಂಡಿತ್ತು. ಮತ್ತೊಂದೆಡೆ ಪಾಕಿಸ್ತಾನವು 2010ರಲ್ಲಿ ಎಂಸಿಜಿಯಲ್ಲಿ ಕೇವಲ 1 ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.
ಅಂತಿಮ ಪ್ಲೇಯಿಂಗ್ XI
ಭಾರತ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ಸಿಂಗ್, ಮುಹಮ್ಮದ್ ಶಮಿ
ಪಾಕಿಸ್ತಾನ XI: ಬಾಬರ್ ಅಝಮ್, ಮುಹಮ್ಮದ್ ರಿಜ್ವಾನ್, ಶಾನ್ ಮಸೂದ್, ಶಾದಾಬ್ ಖಾನ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಝ, ಆಸಿಫ್ ಅಲಿ, ಶಾಹಿನ್ ಅಫ್ರಿದಿ, ನಸೀಮ್ ಶಾ, ಹಾರಿಸ್ ರೌಫ್